ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 ಕಲಂ: ಕೊಪ್ಪಳ, ಬಳ್ಳಾರಿ ಬೇರ್ಪಡಿಸಿ

Last Updated 4 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ಭಾಲ್ಕಿ: ಕೊಪ್ಪಳ ಮತ್ತು ಬಳ್ಳಾರಿಯ ವಕೀಲರು ಗುಲ್ಬರ್ಗಾದ ಸಂಚಾರಿ ನ್ಯಾಯಪೀಠದ ಬದಲು ಧಾರವಾಡದ ನ್ಯಾಯಪೀಠವನ್ನು ಆರಿಸಿಕೊಂಡಿದ್ದರಿಂದ ಆ ಎರಡೂ ಜಿಲ್ಲೆಗಳನ್ನು 371 ಕಲಂನಿಂದ ಬೇರ್ಪಡಿಸುವಂತೆ ಆಗ್ರಹಿಸಿ ಬುಧವಾರ ಭಾಲ್ಕಿಯ ವಕೀಲರ ಸಂಘದಿಂದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಲಾಯಿತು.

ನಂತರ ವಕೀಲರೆಲ್ಲರೂ ಸೇರಿ ತಹಸೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಎನ್.ಬಿ ಪಾಟೀಲ ಮಾತನಾಡಿ, ದಶಕಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 371 ಕಲಂ ಜಾರಿಗೆ ತರಲು ಒಪ್ಪಿಕೊಂಡಿದೆ. ಅಂಥದರಲ್ಲಿ ಕೊಪ್ಪಳ ಮತ್ತು ಬಳ್ಳಾರಿಯ ವಕೀಲರು ಸ್ವಯಂ ನಿರ್ಧಾರ ತೆಗೆದುಕೊಂಡು ಗುಲ್ಬರ್ಗಾದ ಸಂಚಾರಿ ನ್ಯಾಯಪೀಠದ ಬದಲು ಧಾರವಾಡದಲ್ಲಿನ ನ್ಯಾಯಪೀಠವನ್ನು ಆಯ್ಕೆ ಮಾಡಿಕೊಂಡಿರುವದು ಅಕ್ಷಮ್ಯ ಎಂದು ಖಂಡಿಸಿದರು.

ಕೂಡಲೇ ಈ ನಿರ್ಧಾರದಿಂದ ಹಿಂದಕ್ಕೆ ಪಡೆಯದಿದ್ದರೆ 371 ಕಲಂ ನ ಸೌಲಭ್ಯಗಳಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಶ್ರೀಶೈಲ ಪಾಟೀಲ, ಕಾರ್ಯದರ್ಶಿ ಶತ್ರುಘ್ನ ನೆಲವಾಡೆ, ಉಮಾಕಾಂತ ವಾರದ, ಎನ್.ಎನ್. ಸ್ವಾಮಿ, ವೆಂಕಟರಾವ ಭುರಾಳೆ, ಬಿ.ಎನ್. ಮೂಲಗೆ, ಶಿವಶಂಕರ ಲದ್ದೆ, ವಿಜಯಕುಮಾರ ಭುಸಗುಂಡೆ, ಮಾಣಿಕರಾವ ಜಾನಾಪುರಕರ್, ವೈಜಿನಾಥ ಸಿರ್ಸ್ಗಿ, ಸತೀಶ ಲದ್ದೆ, ರಾಮಶಟ್ಟಿ ಜಾಂತೆ, ಸಂಜೀವಕುಮಾರ ಸಾಳುಂಕೆ, ಶ್ರೀಕಾಂತ ಭುರಾಳೆ, ಪ್ರಸನ್ನ ದೇಶಪಾಂಡೆ, ರಾಜಕುಮಾರ ವಾಘಮಾರೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT