ಗುರುವಾರ , ನವೆಂಬರ್ 21, 2019
21 °C
ಅಕ್ರಮ ಮದ್ಯ ಸಾಗಾಟ; 62 ಬಾಕ್ಸ್ ಜಪ್ತಿ

3.80 ಲಕ್ಷ ಅಕ್ರಮ ಹಣ ವಶ

Published:
Updated:

ರಾಯಚೂರು: ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1,36,000 ರೂ ಮೊತ್ತದ ಮದ್ಯ ತುಂಬಿದ 62 ಬಾಕ್ಸ್‌ಗಳನ್ನು ಪೊಲೀಸರು ಮಂಗಳವಾರ ತಡರಾತ್ರಿ ಪೊಲೀಸರು ಜಪ್ತಿ ಮಾಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಬನಗೌಡ ಎಂಬುವವನ್ನು ಬಂಧಿಸಲಾಗಿದೆ. ಅಕ್ರಮ ಮದ್ಯದ ಬಾಕ್ಸ್ ಸಾಗಾಟಕ್ಕೆ ಬಳಸಲಾದ ವಾಹನ ಜಪ್ತಿ ಮಾಡಲಾಗಿದೆ. ಸಹಾಯಕ ಪೊಲೀಸ್ ಅಧೀಕ್ಷಕಿ ದಿವ್ಯಾ ಗೋಪಿನಾಥ್ ಅವರ ಮಾರ್ಗದರ್ಶನದಲ್ಲಿ ಮಾರ್ಕೆಟ್ ಯಾರ್ಡ್ ಠಾಣೆಯ ಪಿಎಸ್‌ಐ ಬೇಬಿ ವಾಲೇಕರ್ ಅವರು ಈ ದಾಳಿ ನಡೆಸಿದ್ದರು. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.3.80 ಲಕ್ಷ ಜಪ್ತಿ: ಸಿಂಧನೂರು ತಾಲ್ಲೂಕು ಧಡೇಸುಗೂರು ಚೆಕ್‌ಪೋಸ್ಟ್ ಹತ್ತಿರ ವಾಹನವನ್ನು ಪೊಲೀಸರು ತಡೆದು 3.80 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಜಪ್ತಿ ಮಾಡಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ಅದೇ ರೀತಿ ರಾಯಚೂರಿನ ಗದ್ವಾಲ್ ರಸ್ತೆಯ ಆರ್.ಆರ್ ಮಿಲ್ ಹತ್ತಿರ ಚೆಕ್ ಪೋಸ್ಟ್‌ನಲ್ಲಿ ವಾಹನ ತಡೆದು ತಪಾಸಣೆ ನಡೆಸಿದ ವೇಳೆ 80 ಸಾವಿರ ಹಣ ಪತ್ತೆಯಾಗಿದ್ದು, ಈ ಹಣವನ್ನೂ ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)