4ನೇ ಮಹಡಿಯಿಂದ ತಳ್ಳಿ ನಿರ್ಮಾಪಕ: ನಾದಿಯಾದ್‌ವಾಲ್ ಮಾವನ ಕೊಲೆ

7

4ನೇ ಮಹಡಿಯಿಂದ ತಳ್ಳಿ ನಿರ್ಮಾಪಕ: ನಾದಿಯಾದ್‌ವಾಲ್ ಮಾವನ ಕೊಲೆ

Published:
Updated:

ಮುಂಬೈ (ಪಿಟಿಐ): ಬಾಲಿವುಡ್ ಚಿತ್ರ ನಿರ್ಮಾಪಕ ಸಾಜಿದ್ ನಾದಿಯಾದ್‌ವಾಲ್ ಅವರ ಮಾವ ಅಜೀಜ್ ರೆಹಮಾನ್ ಖಾನ್ (65) ಅವರನ್ನು ಅವರ ಸಹೋದರನ ಪುತ್ರ ನಾಲ್ಕನೇ ಮಹಡಿಯಿಂದ ತಳ್ಳಿದ ಪರಿಣಾಮ ಅವರು ಮೃತಪಟ್ಟ ಘಟನೆ ಅಂಧೇರಿ ಉಪನಗರದಲ್ಲಿ ನಡೆದಿದೆ.ಸೌರಭ್ ಅಪಾರ್ಟ್‌ಮೆಂಟ್‌ನ `ಎಚ್~ ವಿಭಾಗದಲ್ಲಿ ನೆಲೆಸಿದ್ದ ಅಜೀಜ್ ಅವರು ಮಂಗಳವಾರ ರಾತ್ರಿ 10.30ರ ಸುಮಾರಿಗೆ ಅದೇ ಕಟ್ಟಡದ ನಾಲ್ಕನೇ ಅಂತಸ್ತಿನ `ಎಫ್~ ವಿಭಾಗದಲ್ಲಿರುವ ಅವರ ಸಹೋದರ ಖಾಲಿದ್ ಖಾನ್ ಮನೆಗೆ ತೆರಳಿದ್ದರು.

 

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಕೆಲಹೊತ್ತು ವಾಗ್ವಾದ ನಡೆದಿದೆ. ಇದನ್ನು ಗಮನಿಸುತ್ತಿದ್ದ ಖಾಲಿದ್ ಪುತ್ರ ಷಾಹ್‌ಜೆಬ್ ಖಾನ್ ಕೋಪೋದ್ರಿಕ್ತನಾಗಿ ಅಜೀಜ್ ಅವರನ್ನು ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅಜೀಜ್ ಅವರನ್ನು ಸಮೀಪದ ಕೊಕಿಲಾಬೆನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರರಿಬ್ಬರ ಮಧ್ಯದ ಆಸ್ತಿ ವಿವಾದವೇ ಘಟನೆಗೆ ಕಾರಣ ಎಂದಿರುವ ಪೊಲೀಸರು,

 

ಷಾಹ್‌ಜೆಬ್‌ನನ್ನು ವಶಕ್ಕೆ ತೆಗೆದುಕೊಂಡು ಕೋರ್ಟ್‌ಗೆ ರು ಹಾಜರು ಪಡಿಸಿದರು. ಕೋರ್ಟ್ ಷಾಹ್‌ಜೆಬ್‌ನನ್ನು ಇದೇ 15ರ ವರೆಗೆ  ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry