ಶನಿವಾರ, ಜುಲೈ 31, 2021
25 °C

4ರಂದು ಬಸ್ ದಿನಕ್ಕೆ ಬಿಎಂಟಿಸಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ವತಿಯಿಂದ ನಡೆಯುತ್ತಿರುವ ಬಸ್ ದಿನಾಚರಣೆಯಿಂದಾಗಿ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಇತ್ತೀಚಿನ ವರದಿ ತಿಳಿಸಿದೆ.ಕಳೆದ ವರ್ಷ ಫೆಬ್ರುವರಿಯಿಂದ ಡಿಸೆಂಬರ್‌ವರೆಗೆ ಮಂಡಲಿ ನಡೆಸಿದ ಅಧ್ಯಯನದಲ್ಲಿ ವಾಯು ಮಾಲಿನ್ಯ ಪ್ರಮಾಣ ಶೇ 11.3ರಷ್ಟು ಇಳಿಮುಖವಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಎಂಟಿಸಿ ಅಧಿಕಾರಿಗಳು ಇದೇ ಬುಧವಾರ ಮೇ ತಿಂಗಳ ಬಸ್ ದಿನಾಚರಣೆ ನಡೆಯಲಿದೆ. ಆ ದಿನ ಖಾಸಗಿ ವಾಹನದ ಬದಲಾಗಿ ಸಂಚಾರಕ್ಕೆ ಬಸ್‌ಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.