ಮಂಗಳವಾರ, ಏಪ್ರಿಲ್ 20, 2021
32 °C

4ರಿಂದ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

4ರಿಂದ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್

ಬೆಂಗಳೂರು
: ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಡಿಸೆಂಬರ್ 4ರಿಂದ 9ರ ವರೆಗೆ ಶಿವಮೊಗ್ಗದಲ್ಲಿ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ.

 

ಶಿವಮೊಗ್ಗ ಯೂತ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಸಹ ಇದಕ್ಕೆ ನೆರವು ನೀಡಲಿದ್ದು, ಪುರಷರ ವಿಭಾಗದಲ್ಲಿ 57 ಮತ್ತು ಮಹಿಳಾ ವಿಭಾಗದಲ್ಲಿ 22 ತಂಡಗಳು ಪಾಲ್ಗೊಳ್ಳಲಿವೆ.

ವಿಜಯ ಬ್ಯಾಂಕ್, ಎಂಇಜಿ, ಎಎಸ್‌ಸಿ, ಎಚ್‌ಎಎಸ್‌ಸಿ, ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್, ಮೌಂಟ್ಸ್ ಕ್ಲಬ್, ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ತಂಡಗಳಾಗಿವೆ.

3000 ವೀಸಾ ನೀಡಲು ಭಾರತ ನಿರ್ಧಾರ

ನವದೆಹಲಿ (ಪಿಟಿಐ
): ಮುಂದಿನ ತಿಂಗಳು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟ್ವೆಂಟಿ-20 ಮತ್ತು ಏಕದಿನ ಕ್ರಿಕೆಟ್ ಸರಣಿಯ ಪಂದ್ಯಗಳನ್ನು ನೋಡಲು ಪಾಕಿಸ್ತಾನದ ಕ್ರೀಡಾಪ್ರೇಮಿಗಳಿಗೆ 3000 ವೀಸಾ ನೀಡಲು ಭಾರತ ನಿರ್ಧರಿಸಿದೆ.

ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ವೀಸಾ ನೀಡಬೇಕು ಎನ್ನುವ ಪಾಕ್ ಕೋರಿಕೆಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 25ರಿಂದ ಜನವರಿ 6ರ ಅವಧಿಯಲ್ಲಿ ಈ ಟೂರ್ನಿ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಚೆನ್ನೈ, ಕೋಲ್ಕತ್ತ ಹಾಗೂ ನವದೆಹಲಿಯಲ್ಲಿ ನಡೆಯಲಿದ್ದು, ಎರಡು ಟ್ವೆಂಟಿ-20 ಪಂದ್ಯಗಳು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಆಯೋಜನೆಯಾಗಿವೆ. ಪಾಕಿಸ್ತಾನ ಕ್ರಿಕೆಟ್ ತಂಡ 2007ರಲ್ಲಿ ಕೊನೆಯ ಸಲ ಭಾರತದಲ್ಲಿ ಕ್ರಿಕೆಟ್ ಸರಣಿ ಆಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.