ಗುರುವಾರ , ಜೂನ್ 24, 2021
27 °C

4 ನೂತನ ಬಡಾವಣೆಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ/ ಎಂ.ರವಿ Updated:

ಅಕ್ಷರ ಗಾತ್ರ : | |

4 ನೂತನ ಬಡಾವಣೆಗೆ ಪ್ರಸ್ತಾವ

ಮೈಸೂರು: ನಿವೇಶನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ಈಗಾಗಲೇ ಅಭಿವೃದ್ಧಿಪಡಿ ಸುತ್ತಿರುವ ಬಡಾವಣೆಗಳನ್ನು ಹೊರತುಪಡಿಸಿ ಹೊಸದಾಗಿ ನಾಲ್ಕು ಬಡಾವಣೆಗಳನ್ನು ನಿರ್ಮಾಣ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.ಅರ್ಜಿ ಸಲ್ಲಿಸಿದ ಎಲ್ಲ ಅರ್ಜಿದಾರರಿಗೂ ನಿವೇಶನಗಳನ್ನು ಪೂರೈಸಲು ಮುಡಾಗೆ ಸಾಧ್ಯವಾ ಗುತ್ತಿಲ್ಲ. ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಹೊಸದಾಗಿ ಬಡಾವಣೆಗಳನ್ನು ಪೂರೈಸುವ ಅನಿವಾರ್ಯತೆ ಇದೆ. ಹಾಗಾಗಿ ಹೊಸ ನಾಲ್ಕು ಬಡಾವಣೆ ಮಾಡಲು ಮುಡಾ ಈಗಾಗಲೇ ಸ್ಥಳಗಳನ್ನು ಗುರುತಿಸಿದೆ.ತಾಲ್ಲೂಕಿನ ಚೌಡಹಳ್ಳಿ-ಹಾಲಾಳುವಿನ ಬಳಿ ಸ್ವರ್ಣಜಯಂತಿನಗರ, ಉತ್ತನಹಳ್ಳಿ-ಬಂಡಿಪಾಳ್ಯ ಬಳಿ ಶಾಂತವೇರಿ ಗೋಪಾಲಗೌಡನಗರ 2ನೇ ಹಂತ, ಲಲಿತಾದ್ರಿನಗರ 2ನೇ ಹಂತ ಮತ್ತು ನಾಲ್ವಡಿ ಕೃಷ್ಣರಾಜನಗರ ಬಡಾವಣೆಗಳನ್ನು ಹೊಸದಾಗಿ ಮಾಡಲು ಮುಡಾ ಉದ್ದೇಶಿಸಿದೆ.ಈ ನಾಲ್ಕು ಬಡಾವಣೆಗಳ ಅಭಿವೃದ್ಧಿ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಮುಡಾ ಪ್ರಸ್ತಾವ ಸಲ್ಲಿಸಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ. ಸರ್ಕಾರ ಹಸಿರು ನಿಶಾನೆ ತೋರಿದ್ದೇ ಆದಲ್ಲಿ ಬಡಾವಣೆಗೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊ ಳ್ಳಲು ಮುಡಾ ಮುಂದಾಗಲಿದೆ. ನಾಲ್ಕು ಹೊಸ ಬಡಾವಣೆಗಳನ್ನು ಮಾಡುವುದರಿಂದ 15 ಸಾವಿರ ನಿವೇಶನಗಳನ್ನು ಆಕಾಂಕ್ಷಿಗಳಿಗೆ ನೀಡಬಹುದಾಗಿದೆ.ಆರ್.ಟಿ.ನಗರ 2ನೇ ಹಂತ ಮತ್ತು ನಂಜನಗೂಡಿನಲ್ಲಿ ಬಡಾವಣೆಗಳನ್ನು ನಿರ್ಮಿಸಲು ಈಗಾಗಲೇ ಮುಡಾ ಅರ್ಜಿ ಕರೆದಿತ್ತು. ಒಟ್ಟು 3090 ನಿವೇಶನಗಳಿಗೆ ಸುಮಾರು 80 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಇದಾದ ನಂತರವೂ ನಿವೇಶನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಿತು. ಹಾಗಾಗಿ ಹೊಸದಾಗಿ ಬಡಾವಣೆ ಮಾಡಲು ನಿರ್ಧರಿಸಿದೆ.ಖಾಸಗಿ ಬಡಾವಣೆಗಳಲ್ಲಿ ನಿವೇಶನಗಳಿಗೆ ಹೆಚ್ಚು ಹಣ ಮತ್ತು ದೂರದ ಸ್ಥಳಗಳಲ್ಲಿ ನಿವೇಶನಗಳನ್ನು ನೀಡುತ್ತಿರುವುದರಿಂದ ಮುಡಾ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿಯೇ ನಿವೇಶನಗಳನ್ನು ಪಡೆಯಲು ನಾಗರಿಕರು ಬಯಸುತ್ತಿದ್ದಾರೆ. ಹಾಗಾಗಿ ಮುಡಾ ನಿವೇಶನ ಹಂಚಲು ಅರ್ಜಿ ಕರೆದಾಗಲೆಲ್ಲ ಸಾಕಷ್ಟು ಬೇಡಿಕೆ ಬಂದಿದೆ. ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಿಗೆ ಹಿರಿತನವೆಂದು ಪರಿಗಣಿಸಿ ಅವರಿಂದ ಕಟ್ಟಿಸಿಕೊಂಡಿದ್ದ ಹಣವನ್ನು ಹಿಂದಿರುಗಿಸಿದೆ.`ನಗರ ನಿವಾಸಿಗಳಿಗೆ ಬೇಡಿಕೆಗೆ ಅನುಗುಣವಾಗಿ ನಿವೇಶನಗಳನ್ನು ಹಂಚಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊಸದಾಗಿ ನಾಲ್ಕು ಬಡಾವಣೆಗಳನ್ನು ನಿರ್ಮಿಸಲು ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸಿದ ಕೂಡಲೇ ಈಗಾಗಲೇ ಗುರುತಿಸಿರುವ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಬಡಾವಣೆ ನಿರ್ಮಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಮುಡಾ ಅಧ್ಯಕ್ಷ ಎಲ್.ನಾಗೇಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.