ಸೋಮವಾರ, ನವೆಂಬರ್ 18, 2019
23 °C
ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ -2013

4 ಬಾರಿ ಒಬ್ಬರಿಗೆ, 3 ಬಾರಿ ಇಬ್ಬರಿಗೆ ಜಯ

Published:
Updated:

ಮೈಸೂರು: ಒಂದು, ಎರಡು, ಮೂರು, ನಾಲ್ಕು.. ಇದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಅವಧಿ. 1952 ರಿಂದ ಅಸ್ತಿತ್ವದಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್‌ನದ್ದೇ ಪ್ರಾಬಲ್ಯ. `ಕಮಲ' ಅರಳಿದ್ದು ಒಂದೇ ಬಾರಿ.ಕೆ.ವೆಂಕಟೇಶ್ 4 ಬಾರಿ, ಕೆ.ಎಸ್.ಕಾಳ ಮರೀಗೌಡ ಹಾಗೂ ಎಚ್.ಎಂ.ಚನ್ನಬಸಪ್ಪ ಅವರು ತಲಾ 3 ಬಾರಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಕೆ.ಎಂ.ದೇವಯ್ಯ, ಎನ್.ಆರ್. ಸೋಮಣ್ಣ, ಎಚ್.ಸಿ.ಬಸವರಾಜು ಒಂದು ಅವಧಿಗೆ ತೃಪ್ತಿಪಟ್ಟುಕೊಂಡಿದ್ದಾರೆ.1952 ರಲ್ಲಿ ಪಿರಿಯಾಪಟ್ಟಣ ದ್ವಿಸದಸ್ಯ ಕ್ಷೇತ್ರವಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಎಂ.ಮರಿಯಪ್ಪ (12447 ಮತ) ಹಾಗೂ ಕಾಂಗ್ರೆಸ್‌ನ ಎಚ್.ಎಂ.ಚನ್ನಬಸಪ್ಪ (11913 ಮತ) ಆಯ್ಕೆಯಾಗಿದ್ದರು. 1957 ರಲ್ಲಿ ಕಾಂಗ್ರೆಸ್‌ನ ಎನ್.ಆರ್.ಸೋಮಣ್ಣ (19714 ಮತ), 1962 ರಲ್ಲಿ ಕಾಂಗ್ರೆಸ್‌ನ ಕೆ.ಎಂ.ದೇವಯ್ಯ (16359 ಮತ), 1967 ಮತ್ತು 1972 ರಲ್ಲಿ ಎಚ್.ಎಂ.ಚನ್ನಬಸಪ್ಪ ಅವರು ಪಕ್ಷೇತರ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.ಕೆ.ವೆಂಕಟೇಶ್ ಅವರು 1985, 1994, 2004 ಹಾಗೂ 2008 ರಲ್ಲಿ ಕ್ರಮವಾಗಿ ಜನತಾಪಕ್ಷ, ಜನತಾದಳ, ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ  ಸ್ಪರ್ಧಿಸಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಕೆ.ಎಸ್.ಕಾಳಮರೀ ಗೌಡ ಅವರು 1978, 1983 ಹಾಗೂ 1989 ರಲ್ಲಿ ಕ್ರಮವಾಗಿ ಜನತಾಪಕ್ಷ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿದರೂ ಅದೃಷ್ಟ ಖುಲಾಯಿಸಿಲ್ಲ.1952 ರಿಂದ 2008ರ ವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಬಾರಿ ಮಾತ್ರ ಗೆಲ್ಲುವ ಅವಕಾಶ ಲಭ್ಯವಾಗಿದೆ. 1999 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಸಿ. ಬಸವರಾಜು ಅವರು 43,399 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆ.ಎಸ್.ಕಾಳಮರೀಗೌಡ ಅವರನ್ನು ಪರಾಭವಗೊಳಿಸಿದ್ದರು. ಇದುವರೆಗೆ ನಡೆದ ಚುನಾವಣೆಯಲ್ಲಿ ಕೆ.ವೆಂಕಟೇಶ್ ಅತೀ ಹೆಚ್ಚು (53,111) ಮತ ಪಡೆದರೆ, ಎಸ್.ಎಂ.ಮರಿಯಪ್ಪ  (12447) ಅತೀ ಕಡಿಮೆ ಮತ ಪಡೆದಿದ್ದಾರೆ.ಕಣದಲ್ಲಿ ಇದ್ದವರು ಯಾರ‌್ಯಾರು?

2008- ಎಚ್.ಡಿ.ಗಣೇಶ್, ಬಿ.ಎಸ್. ರಾಮಚಂದ್ರ, ಸಿ.ಜಗದೀಶ್, ಶಶಿಕುಮಾರ್, ಅಣ್ಣೇಗೌಡ.

2004- ಎಚ್.ಡಿ.ಗಣೇಶ್, ಎಚ್.ಸಿ. ಬಸವರಾಜು, ಎಚ್.ಪ್ರಕಾಶ್, ಅಣ್ಣೇಗೌಡ, ಲಕ್ಷ್ಮಿ ನರಸಿಂಹಾಚಾರ್.1999- ಕೆ.ವೆಂಕಟೇಶ್, ಟಿ.ಎಂ.ನಾಗರಾಜು.1994- ಚೌಡಯ್ಯ, ಎಚ್.ಸಿ.ಲೋಕೇಶ್‌ರಾಜೇ ಅರಸ್, ಟಿ.ಸಿ.ವಸಂತರಾಜು ಅರಸ್, ಸಿ.ಕಮಲಮ್ಮ. ವೆಂಕಟೇಶ್‌ಮೂರ್ತಿ, ಎಚ್.ಎಂ.ಕೇಶವ, ಕಾಳಮ್ಮ, ಸಣ್ಣಮ್ಮ, ಯಶೋಧ ರಾಮಣ್ಣ, ಎಂ.ಡಿ.ರಾಜಯ್ಯ.1989- ಕೆ.ವೆಂಕಟೇಶ್, ಎಚ್.ಎಸ್. ಬೋರಲಿಂಗೇಗೌಡ, ಜಿ.ಶಂಕರಪ್ಪ.1985- ಎಸ್.ಸಣ್ಣಪ್ಪ, ಕೆ.ಆರ್. ತಿಮ್ಮಯ್ಯ, ನಿಂಗಮ್ಮ, ಅಖಿಲಾ ಚಕ್ರವರ್ತಿ.1983- ಕೆ.ಆರ್.ತಿಮ್ಮಯ್ಯ, ಕೆ.ಸಿದ್ದಪ್ಪ, ವೆಂಕಟೇಶ್‌ಮೂರ್ತಿ, ಕುಂಟಯ್ಯ, ನಿಂಗಮ್ಮ, ಎಚ್.ಡಿ.ಕೃಷ್ಣೇಗೌಡ, ಮಲ್ಲೇಶ್, ಸೋಮಶೇಖರಯ್ಯ.

ಪ್ರತಿಕ್ರಿಯಿಸಿ (+)