ಶುಕ್ರವಾರ, ನವೆಂಬರ್ 15, 2019
27 °C

4 ವಿಧಾನಸಭಾ ಕ್ಷೇತ್ರ; ಚುನಾವಣಾ ವೀಕ್ಷಕರ ನೇಮಕ

Published:
Updated:

ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ.ಹನೂರು ಕ್ಷೇತ್ರಕ್ಕೆ ವಿ. ರಾಂವಿಶಾಲ್ ಮಿಶ್ರಾ (ಮೊಬೈಲ್ 94806 46170,  ದೂರವಾಣಿ ಸಂಖ್ಯೆ 08224-252046), ಕೊಳ್ಳೇಗಾಲ ಕ್ಷೇತ್ರಕ್ಕೆ ಪಿ.ಎನ್.ಬಿ. ಶರ್ಮಾ(ಮೊಬೈಲ್ 94803 66170, ದೂರವಾಣಿ ಸಂಖ್ಯೆ 08224-253615), ಚಾಮರಾಜನಗರ ಕ್ಷೇತ್ರಕ್ಕೆ ಹಿಮ್ಮತ್‌ರಾವ್ ಪಾಟೀಲ್ (ಮೊಬೈಲ್ 094048 22091, 94804 96170, ದೂರವಾಣಿ ಸಂಖ್ಯೆ 08226-222016, ಪ್ರವಾಸಿ ಮಂದಿರದ ದೂರವಾಣಿ ಸಂಖ್ಯೆ 08226-225270 ಹಾಗೂ ಗುಂಡ್ಲುಪೇಟೆ ಕ್ಷೇತ್ರಕ್ಕೆ ಡಿ.ಎಸ್. ಪಂಡಿತ್(ಮೊಬೈಲ್ 94804 36170, ದೂರವಾಣಿ ಸಂಖ್ಯೆ 08229-222225) ಅವರನ್ನು ನೇಮಕ ಮಾಡಲಾಗಿದೆ.ಹನೂರು ವೀಕ್ಷಕರು ಕೊಳ್ಳೇಗಾಲ ತಾಲ್ಲೂಕು ಕಚೇರಿಯಲ್ಲಿ ಪ್ರತಿದಿನ ಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಲಭ್ಯರಿರುತ್ತಾರೆ. ಕೊಳ್ಳೇಗಾಲ ಕ್ಷೇತ್ರದ ವೀಕ್ಷಕರು ಕೊಳ್ಳೇಗಾಲದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಹಾಜರಿರುತ್ತಾರೆ. ಚಾಮರಾಜನಗರ ಕ್ಷೇತ್ರದ ವೀಕ್ಷಕರು ಚಾಮರಾಜನಗರದ ತಾಲ್ಲೂಕು ಕಚೇರಿಯಲ್ಲಿ ಸಂಜೆ 4 ಗಂಟೆಯಿಂದ 6ಗಂಟೆವರೆಗೆ ಉಪಸ್ಥಿತರಿರುತ್ತಾರೆ. ಗುಂಡ್ಲುಪೇಟೆ ಕ್ಷೇತ್ರದ ವೀಕ್ಷಕರು ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಹಾಜರಿರುತ್ತಾರೆ.ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರು ಹಾಗೂ ಅಹವಾಲುಗಳಿದ್ದರೆ ನಾಗರಿಕರು ಆಯಾ ವಿಧಾನಸಭಾ ಕ್ಷೇತ್ರದ ವೀಕ್ಷಕರಿಗೆ ದೂರವಾಣಿ ಮೂಲಕ ಅಥವಾ ನಿಗದಿಪಡಿಸಿರುವ ಕಚೇರಿ ಸಮಯದಲ್ಲಿ ಖುದ್ದಾಗಿ ಭೇಟಿ ಮಾಡಿ ಅಹವಾಲು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ತಿಳಿಸಿದ್ದಾರೆ.ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆ

ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ನೇಮಕವಾಗಿರುವ ಚುನಾವಣಾ ಸಾಮಾನ್ಯ ವೀಕ್ಷಕರು ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಏ. 19ರಂದು ಬೆಳಿಗ್ಗೆ 11.30ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ 103ರಲ್ಲಿ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಅಧಿಕಾರಿಗಳ ತಂಡ ನೇಮಕ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭದ್ರತಾ ಕೊಠಡಿ ಮತ್ತು ಎಣಿಕೆ ಕೊಠಡಿ ನಿರ್ಮಿಸಿ ಅಗತ್ಯ ವ್ಯವಸ್ಥೆ ಮಾಡಲು ಅಧಿಕಾರಿಗಳ ತಂಡ ರಚಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸತ್ಯಾನಂದ ತಂಡದ ನೋಡೆಲ್ ಅಧಿಕಾರಿಯಾಗಿದ್ದಾರೆ.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತ್ಯನಾರಾಯಣ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಜಿಲ್ಲಾಧಿಕಾರಿ  ಕಚೇರಿಯ ಪರೀಕ್ಷಾರ್ಥ ಸಹಾಯಕ ಆಯುಕ್ತರಾದ ಈ. ವಿಜಯ, ಡಿವೈಎಸ್‌ಪಿ ಮುತ್ತುಸ್ವಾಮಿ ನಾಯ್ಡು, ಸೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್ ಲೂರ್ದುಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಶಿವಾನಂದ, ಎನ್‌ಐಸಿ ಅಧಿಕಾರಿ ಯತಿರಾಜ್, ಬಿಎಸ್‌ಎನ್‌ಎಲ್ ಸಬ್ ಡಿವಿಜನಲ್ ಎಂಜಿನಿಯರ್ ಮಹದೇವಯ್ಯ, ಪಿಆರ್‌ಇಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮಣರಾವ್, ಚಾಮರಾಜನಗರ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಇ. ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಜಗದೀಶ್, ಯಳಂದೂರು ಪಟ್ಟಣ ಪಂಚಾಯಿತಿಯ ಕಿರಿಯ ಎಂಜಿನಿಯರ್ ಬೆಟ್ಟಸ್ವಾಮಿ ತಂಡದ ಸದಸ್ಯರಾಗಿದ್ದಾರೆ.

ಪ್ರತಿಕ್ರಿಯಿಸಿ (+)