4 ಸಾವಿರ ಆಟಿಕೆ ಕಾರುಗಳ ಒಡೆಯ!

ಭಾನುವಾರ, ಜೂಲೈ 21, 2019
27 °C

4 ಸಾವಿರ ಆಟಿಕೆ ಕಾರುಗಳ ಒಡೆಯ!

Published:
Updated:

ಇಸ್ಲಾಮಾಬಾದ್, (ಐಎಎನ್‌ಎಸ್): ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ. ಅಂತೆಯೇ ಲಾಹೋರ್‌ನ 39ರ ಹರೆಯದ ಅಮೀರ್ ಅಶ್ಫಾಕ್ ಆಟಿಕೆ ಕಾರುಗಳನ್ನು ಸಂಗ್ರಹಿಸುವ ಹವ್ಯಾಸ ಕುತೂಹಲಕರ.ಅಶ್ಫಾಕ್ ಎಂಟನೇ ವಯಸ್ಸಿನಲ್ಲೇ ಆಟಿಕೆ ಕಾರುಗಳನ್ನು ಸಂಗ್ರಹಿಸಲು ಆರಂಭಿಸಿದ್ದು ಈಗ ಅವರ ಬಳಿ ಸುಮಾರು ನಾಲ್ಕು ಸಾವಿರದಷ್ಟು ಕಾರುಗಳಿವೆ. ಇಷ್ಟೊಂದು ಆಟಿಕೆ ಕಾರುಗಳನ್ನು ಹೊಂದಿರುವವರು ಪಾಕ್‌ನಲ್ಲಂತೂ ಇನ್ನಾರೂ ಇಲ್ಲ ಎಂದು ಅಶ್ಫಾಕ್ ಹೇಳುತ್ತಾರೆ.ಅಶ್ಫಾಕ್  ಮಾರುಕಟ್ಟೆಗೆ ಹೋದಾಗಲೆಲ್ಲ ಹೊಸ ಹೊಸ ಕಾರುಗಳ ಹುಡುಕಾಟದಲ್ಲಿ ತೊಡಗುತ್ತಾರೆ. ಇದೀಗ ಅವರ ಬಳಿ 45 ವಿವಿಧ ಬ್ರಾಂಡ್‌ಗಳ ಕಾರುಗಳಿದ್ದು ಇವುಗಳ ಸಂಗ್ರಹಕ್ಕಾಗಿ ತನ್ನ ಮನೆಯಲ್ಲಿ ವಿಶೇಷ ಕೋಣೆಯನ್ನೇ ಕಟ್ಟಿದ್ದಾರೆ.ವಿವಿಧ ಮಾದರಿಯ ಕಾರುಗಳು ಇವರ ಸಂಗ್ರಹದಲ್ಲಿದ್ದು ಹೆಚ್ಚಿನವುಗಳು ಅಮೆರಿಕ, ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್, ಗ್ರೀಸ್, ಜಪಾನ್, ಹಾಂಗ್‌ಕಾಂಗ್, ಥಾಯ್‌ಲ್ಯಾಂಡ್, ಮಲೇಷ್ಯಾ, ಚೀನಾದಲ್ಲಿ ತಯಾರಿಸಲ್ಪಟ್ಟವುಗಳಾಗಿವೆ. ಮರ್ಸಿಡೆಸ್ ಬೆಂಜ್, ಆಡಿ, ಫೋಕ್ಸ್‌ವ್ಯಾಗನ್, ಫೆರಾರಿ, ಫಿಯಟ್, ಆಸ್ಟಿನ್ ಮಾರ್ಟಿನ್ ಮುಂತಾದ ಬ್ರಾಂಡ್‌ನ ಕಾರುಗಳು ಈ ಸಂಗ್ರಹದಲ್ಲಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry