40ಕ್ಕೂ ಅಧಿಕ ಬಂಡುಕೋರರ ಹತ್ಯೆ
ಕಾಬೂಲ್ (ಎಪಿ): ಆಫ್ಘಾನಿಸ್ತಾನದ ನೈರುತ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 40ಕ್ಕೂ ಅಧಿಕ ಬಂಡುಕೋರರು ಹತ್ಯೆಗೀಡಾಗಿದ್ದಾರೆ ಎಂದು ನ್ಯಾಟೊ ತಿಳಿಸಿದೆ.
ಮಾದಕ ವಸ್ತು ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರರನ್ನು ಗುರಿಯಾಗಿರಿಸಿಕೊಂಡು ನ್ಯಾಟೊ ನಡೆಸುತ್ತಿರುವ ದಾಳಿಯಲ್ಲಿ ನೈರುತ್ಯ ಹೆಲ್ಮಾಂಡ್ ಪ್ರದೇಶದಲ್ಲಿ ಗುರುವಾರ ಸುಮಾರು 30ಕ್ಕೂ ಅಧಿಕ ಬಂಡುಕೋರರು ಬಲಿಯಾಗಿದ್ದಾರೆ. ಪಶ್ಚಿಮ ಕುನಾರ್ ಭಾಗದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಅದು ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.