ಭಾನುವಾರ, ಮೇ 9, 2021
27 °C

40 ಪ್ರಕರಣ ಆರೋಪಿ ಸೇರಿ ಕುಖ್ಯಾತ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪೊಲೀಸರಿಗೆ ಬೇಕಾಗಿದ್ದ 40 ಪ್ರಕರಣಗಳ ಆರೋಪಿ ಸೇರಿದಂತೆ ಏಳು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.`ಆರೋಪಿಗಳಿಂದ ಒಂದೂಕಾಲು ಕೆ.ಜಿ.ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ, ಕಾರು, ಆರು ಬೈಕ್‌ಗಳು ಸೇರಿದಂತೆ ಸುಮಾರು ್ಙ50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ' ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಸ್.ಮುರುಗನ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.40 ಪ್ರಕರಣಗಳ ಆರೋಪಿ: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.ವಾಲ್ಮೀಕಿನಗರದ ಇಮ್ರಾನ್ ಖಾನ್ ಅಲಿಯಾಸ್ ಚೋರ್ ಇಮ್ರಾನ್ (22), ಗುರಪ್ಪನಗರದ ಅಮೀರ್ ಖಾನ್ (22) ಮತ್ತು ದೊಡ್ಡಮಾವಳ್ಳಿಯ ರಿಜ್ವಾನ್ ಬೇಗ್ (24) ಬಂಧಿತರು. ಆರೋಪಿ ಇಮ್ರಾನ್ ವಿರುದ್ಧ ಕಮರ್ಷಿಯಲ್‌ಸ್ಟ್ರೀಟ್, ಕೆ.ಆರ್.ಪುರ, ವಿಜಯನಗರ, ಕೆಂಪೇಗೌಡನಗರ, ಹನುಮಂತನಗರ, ಚಾಮರಾಜಪೇಟೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ.

ಬೀಗ ಹಾಕಿದ ಮನೆಗಳನ್ನು ಪತ್ತೆ ಮಾಡುತ್ತಿದ್ದ ಆರೋಪಿಗಳು, ಹಾಡಹಗಲೇ ಬೀಗ ಮುರಿದು ಮನೆಯೊಳಗೆ ನುಗ್ಗಿ ಹಣ, ಚಿನ್ನಾಭರಣ ದೋಚುತ್ತಿದ್ದರು. ಆ ಹಣದಲ್ಲೇ ಮುಂಬೈ, ಗೋವಾ ಸೇರಿದಂತೆ ಇತರೆ ರಾಜ್ಯಗಳಿಗೆ ತೆರಳಿ ಮೋಜಿನ ಜೀವನ ನಡೆಸುತ್ತಿದ್ದರು.`ಆರೋಪಿಗಳು, ಕಟ್ಟಡದ ನೆಲಮಹಡಿ ಹಾಗೂ ಮೊದಲ ಮಹಡಿಯ ಮನೆಗಳಲ್ಲಿ ಮಾತ್ರ ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಇಮ್ರಾನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, `ನೆಲ ಅಂತಸ್ತಿನ ಮನೆಗಳಲ್ಲಿ ಕಳ್ಳತನ ಮಾಡುವುದು ಹಾಗೂ ಅಲ್ಲಿಂದ ಪರಾರಿಯಾಗುವುದು ಸುಲಭ' ಎಂದು ಹೇಳಿದ್ದಾನೆ. ಆತನ ತಂದೆ ಏಜಾಜ್ ಖಾನ್ ದಾದಾಪೀರ್ ವಿರುದ್ಧವೂ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ' ಎಂದು ಪೊಲೀಸರು ಮಾಹಿತಿ ನೀಡಿದರು.ಕ್ಯಾನ್ಸರ್ ಚಿಕಿತ್ಸೆಗೆ ಕಳ್ಳತನ?: ಕಾರು ಮತ್ತು ದುಬಾರಿ ಮೌಲ್ಯದ ಮೊಬೈಲ್ ಕಳವು ಮಾಡಿದ್ದ ಪಿಲಕಲ್ ನಜೀರ್ (21) ಎಂಬಾತನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. `ಮಗ ಬಿಬಿಎಂ ಓದುತ್ತಿದ್ದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ಆತನ ಚಿಕಿತ್ಸೆಗಾಗಿ ಕಳ್ಳತನ ಮಾಡಿದೆ' ಎಂದು ಆರೋಪಿ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾನೆ.ಆರೋಪಿ ನಜೀರ್, ಬಿಟಿಎಂ ಲೇಔಟ್‌ನ ಒಂದನೇ ಹಂತದಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದಾನೆ. ಇತ್ತೀಚೆಗೆ ಆತ, ಕೆಂಗೇರಿಯ ಶೋರೂಂನಿಂದ ಒಂದು ಕಾರು ಹಾಗೂ ದುಬಾರಿ ಮೌಲ್ಯದ ಮೊಬೈಲ್ ಕಳವು ಮಾಡಿದ್ದ. ಖಚಿತ ಮಾಹಿತಿಯಿಂದ ಆರೋಪಿಯನ್ನು ಬಂಧಿಸಿ ರೂ12.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.`ಮೊದಲು ನಾನು ವಿದೇಶದಲ್ಲಿ ನೆಲೆಸಿದ್ದೆ. ಅಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದೆ. ಇತ್ತೀಚೆಗೆ ನಗರಕ್ಕೆ ಬಂದು ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದೇನೆ. ನಗರಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ಪ್ರವಾಸ ಸ್ಥಳಗಳ ಬಗ್ಗೆ ವಿವರಣೆ ನೀಡುವ ಮಾರ್ಗದರ್ಶಕನಾಗಿ ಕೆಲಸ ಮಾಡುತ್ತಿದ್ದೆ' ಎಂದು ಆರೋಪಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.