40 ಲಕ್ಷ ರೈತರಿಂದ ಶೂನ್ಯ ಬಂಡವಾಳ ಕೃಷಿ

7

40 ಲಕ್ಷ ರೈತರಿಂದ ಶೂನ್ಯ ಬಂಡವಾಳ ಕೃಷಿ

Published:
Updated:

ಗುಲ್ಬರ್ಗ: ದೇಶದಲ್ಲಿ ಸುಮಾರು 40ಲಕ್ಷ ರೈತರು ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಶೂನ್ಯ ಬಂಡವಾಳ ಕೃಷಿ ತಜ್ಞ ಸುಭಾಷ ಪಾಳೇಕರ್ ಹೇಳಿದರು.ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಗುಲ್ಬರ್ಗ ವಿಭಾಗಮಟ್ಟದ 4 ದಿನಗಳ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ತರಬೇತಿ ಶಿಬಿರದಲ್ಲಿ ಅವರು ಶುಕ್ರವಾರ ಜೀವಾಮೃತ ತಯಾರಿಕೆ ಕುರಿತು ಮಾಹಿತಿ ನೀಡಿದರು. ನಮ್ಮ ದೇಶವಲ್ಲದೇ ಅಮೆರಿಕಾ, ದಕ್ಷಿಣ ಪೂರ್ವ ಏಷ್ಯಾ ಹಾಗೂ ಇತರ ದೇಶದ ರೈತರು ಸಹ ಶೂನ್ಯ ಕೃಷಿ ಬಂಡವಾಳವನ್ನು ಅಳವಡಿಸಿಕೊಂಡಿದ್ದಾರೆ ಎಂದರು.ಒಂದು ದೇಶಿ ಹಸುವಿನಿಂದ  ಮೂರು ಎಕರೆ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ರೈತರು ಪರಂಪರಾಗತ ಹಳೇ ದೇಶಿ ಸಾಧನ-ಸಲಕರಣೆಗಳಿಂದ ಭೂಮಿ ಉಳುಮೆ ಮಾಡಬೇಕು. ರಾಸಾಯನಿಕ ಬಳಸಬಾರದು ಎಂದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ  ಇಲ್ಲಿಗೆ ಈ ಪದ್ಧತಿ ಅತ್ಯಂತ ಉಪಯುಕ್ತ ಎಂದರು.ಇದೇ ಸಂದರ್ಭದಲ್ಲಿ ಅವರು ಜೀವಾಮೃತ ಮತ್ತು ಘನ ಜೀವಾಮೃತವನ್ನು ತಯಾರಿಸುವ ವಿಧಾನ ಮತ್ತು ಮಾದರಿಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.  ಪರಿಶಿಷ್ಟ ಜಾತಿಯ 14 ಫಲಾನುಭವಿಗಳಿಗೆ ದೇಶಿ ಹಸುಗಳನ್ನು ವಿತರಿಸಿದರು. ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry