ಮಂಗಳವಾರ, ನವೆಂಬರ್ 19, 2019
29 °C

40 ವರ್ಷಗಳ ನಂತರ ನೆರುಡಾ ಶವ ಪರೀಕ್ಷೆ

Published:
Updated:

ಇಸ್ಲಾ ನೆಗ್ರಾ, ಚಿಲಿ (ಐಎಎನ್‌ಎಸ್): 1973ರಲ್ಲಿ ಸತ್ತ ಚಿಲಿಯ ಖ್ಯಾತ ಕವಿ ಪಾಬ್ಲೊ ನೆರುಡಾ, ಸರ್ವಾಧಿಕಾರಿ ಆಗಸ್ಟೊ ಪನೊಚೆಟ್‌ನ ಏಜೆಂಟ್‌ನಿಂದ ಕೊಲೆಯಾದರೋ ಅಥವಾ ಕ್ಯಾನ್ಸರ್‌ನಿಂದ ಸತ್ತರೋ ಎಂಬುದನ್ನು ಪತ್ತೆಹಚ್ಚಲು ಅವರ ಸಮಾಧಿಯನ್ನು ಅಗೆದು ಅವಶೇಷಗಳನ್ನು ಹೊರ ತೆಗೆಯಲಾಗಿದೆ.ಪಾಬ್ಲೊ,  1971ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ಹಲವು ತಿಂಗಳ ಸಿದ್ಧತೆ ನಂತರ ಅವರ ದೇಹದ ಅವಶೇಷಗಳನ್ನು ಹೊರ ತೆಗೆಯಲಾಗಿದೆ.

ಪ್ರತಿಕ್ರಿಯಿಸಿ (+)