400 ಮೀ.ನಲ್ಲಿ ಮಾತ್ರ ಸ್ಪರ್ಧೆ: ಅಶ್ವಿನಿ

ಮಂಗಳವಾರ, ಜೂಲೈ 23, 2019
27 °C

400 ಮೀ.ನಲ್ಲಿ ಮಾತ್ರ ಸ್ಪರ್ಧೆ: ಅಶ್ವಿನಿ

Published:
Updated:

ಬೆಂಗಳೂರು: ಉದ್ಯಾನ ನಗರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕೇವಲ 400 ಮೀಟರ್ ವಿಭಾಗದಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಕರ್ನಾಟಕದ ಅಶ್ವಿನಿ ಅಕ್ಕುಂಜಿ ಹೇಳಿದ್ದಾರೆ.`ಅಭ್ಯಾಸದ ವೇಳೆ ಕೈನೋವಿಗೆ ಒಳಗಾಗಿದ್ದೆ. ಈಗಷ್ಟೆ ಆ ನೋವಿನಿಂದ ಸುಧಾರಿಸಿಕೊಂಡಿದ್ದೇನೆ. ಹಾಗಾಗಿ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 400 ಮೀ.ನಲ್ಲಿ ಮಾತ್ರ ಸ್ಪರ್ಧಿಸಲಿದ್ದೇನೆ~ ಎಂದು ಅಶ್ವಿನಿ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಕೆಲ ದಿನಗಳಿಂದ ಅಭ್ಯಾಸ ನಡೆಸಲು ಸಾಧ್ಯವಾಗದ ಕಾರಣ ಪ್ರದರ್ಶನ ಮಟ್ಟದಲ್ಲಿ ಕುಸಿತ ಕಂಡಿದ್ದೇನೆ. ಮೊದಲಿನಷ್ಟು ಸಮಯದಲ್ಲಿ ಕ್ರಮಿಸಲು ಸಾಧ್ಯವಾಗುವುದಿಲ್ಲ. ಆದರೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ~ ಎಂದು ಅವರು ನುಡಿದಿದ್ದಾರೆ.`ಜಪಾನ್‌ನ ಕೋಬ್‌ನಲ್ಲಿ ಜುಲೈ 7ರಿಂದ 10ರವರೆಗೆ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಸಂಬಂಧ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಅದರಲ್ಲಿ ಸ್ಪರ್ಧಿಸುವುದು ಅನುಮಾನ. ಆದರೆ ದಕ್ಷಿಣ ಕೊರಿಯಾದ ಡೇಗುನಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 4ರವರೆಗೆ ಜರುಗಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ತೆರಳುತ್ತೇನೆ~ ಎಂದರು.`ಪಟಿಯಾಲದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಾಲ್ಗೊಂಡಿದ್ದೇನೆ. ಕೈನೋವಿನಿಂದ ಈಗ ಸುಧಾರಿಸಿಕೊಂಡಿದ್ದು ಪೂರ್ಣ ಪ್ರಮಾಣದ ಅಭ್ಯಾಸ ನಡೆಸಬೇಕಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ಗೆ ಇನ್ನೂ ಎರಡೂವರೆ ತಿಂಗಳು ಸಮಯಾವಕಾಶವಿದೆ. ಅದರಲ್ಲಿ ನಾನು 400 ಮೀ., ಹರ್ಡಲ್ಸ್ ಹಾಗೂ 4್ಡ400 ರಿಲೇನಲ್ಲಿ ಸ್ಪರ್ಧಿಸಲಿದ್ದೇನೆ. ಈಗಾಗಲೇ ಅದಕ್ಕೆ ಅರ್ಹತೆ ಗಿಟ್ಟಿಸಿದ್ದೇವೆ~ ಎಂದು ಅಶ್ವಿನಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry