ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41ಜೋಡಿಗೆ ಕಂಕಣಭಾಗ್ಯ

Last Updated 3 ಜೂನ್ 2013, 9:39 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿಗೆ ಸಮೀಪದ ದೇವಲಾಪುರ ಗ್ರಾಮದ ವಸಗೇರಪ್ಪಸ್ವಾಮಿ ದೇವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಾನುವಾರ 41ಜೋಡಿ ಉಚಿತ ಸಾಮೂಹಿಕ ವಿವಾಹಗಳು ಜರುಗಿದವು.

ಮರಿಸ್ವಾಮಿ ಒಡೆಯರು, ಗುರು ಲಿಂಗಯ್ಯ ಒಡೆಯರು, ಶರಣಬಸಯ್ಯ ಸ್ವಾಮಿ, ಗಂಗಯ್ಯಸ್ವಾಮಿ ಒಡೆಯರು ಸಾನಿಧ್ಯದಲ್ಲಿ ವಸಗೇರಪ್ಪಸ್ವಾಮಿ ದೇವರ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಸಂಸದೆ ಜೆ. ಶಾಂತ ಮಾತನಾಡಿ, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಸಹಕಾರದೊಂದಿಗೆ ಗ್ರಾಮದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ನಂತರ ಸಪ್ತಪದಿ ತುಳಿದ ನವದಂಪತಿಗಳಿಗೆ ಶುಭ ಹಾರೈಸಿ ಭವಿಷ್ಯದಲ್ಲಿ ಸಾಮರಸ್ಯದಿಂದ ಜೀವನ ನಡೆಸುವ ಮೂಲಕ ಹಿತಮಿತ ಸಂತಾನ ಹೊಂದಿ ಸಮಾಜಕ್ಕೆ ಮಾದರಿಯಾಗುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗುಬಾಜಿ ಸುಮಂಗಳಮ್ಮ, ಕೆಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕಡೇಮನೆ ಪಂಪಾಪತಿ, ಎಪಿಎಂಸಿ ಅಧ್ಯಕ್ಷ ಎನ್. ಪುರುಷೋತ್ತಮ, ತಾ.ಪಂ ಮಾಜಿ ಅಧ್ಯಕ್ಷ ಸಿ.ಡಿ. ಮಹಾದೇವ, ಗ್ರಾ.ಪಂ ಅಧ್ಯಕ್ಷೆ ಶಾರದಮ್ಮ ಜಡೆಯಪ್ಪ ಒಡೆಯರು, ಉಪಾಧ್ಯಕ್ಷೆ ಸಿ.ಡಿ. ಚನ್ನಪ್ಪ ಮತ್ತು ಸದಸ್ಯರು, ಸಹಕಾರ ಸಂಘ ಉಪಾಧ್ಯಕ್ಷ ಯು. ಸತ್ಯಣ್ಣ, ಮುಖಂಡರಾದ ಕುರಿ ದಾನಪ್ಪ, ಡಿ. ಕರೆಹನುಮಂತಪ್ಪ, ಗೊರವರ ಪಕ್ಕೀರಪ್ಪ, ಶಾಂತನಗೌಡ, ಕಂಬಳಿ ಪಂಪಣ್ಣ, ಸಿದ್ಧನಗೌಡ, ಭೀಮಣ್ಣ, ಮಲ್ಲೇಶ್, ಸಂಗಟಿ ನಾಗಪ್ಪ, ಕುರಿ ಬೆನಕಪ್ಪ, ಹೊನ್ನೂರಪ್ಪ, ಕೆ. ಮಲ್ಲಯ್ಯ, ಸಿ.ಡಿ. ಕುಮಾರಸ್ವಾಮಿ, ಕುರಿ ಜಡೆಪ್ಪ, ಎನ್. ಮಲ್ಲಿಕಾರ್ಜುನ, ಪಿ. ಶಿವರಾಮ, ತುಂಬಳ ರಮೇಶ್, ಸಾಬಣ್ಣ, ಜಿ. ಗಾದಿಲಿಂಗಪ್ಪ, ಹಾಲುಮತ ಸಮಾಜ ಬಾಂಧವರು, ಗ್ರಾಮದ ಪ್ರಮುಖರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT