ಮಂಗಳವಾರ, ಜೂನ್ 15, 2021
27 °C
ಭಾರತ–ಶ್ರೀಲಂಕಾ ಮಾತುಕತೆ ಇಂದು

42 ಭಾರತೀಯ ಮೀನುಗಾರರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಮೀನು­ಗಾ­ರರ ಸಮಸ್ಯೆ ಬಗೆಹರಿಸಲು ಗುರುವಾರ ಇಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ದ್ವಿಪ­ಕ್ಷೀಯ ಮಾತುಕತೆ ನಡೆಯಲಿದೆ.

ಇದರ ಮಧ್ಯೆ, ಶ್ರೀಲಂಕಾ ಕರಾ­ವಳಿ­ಯಲ್ಲಿ ಮೀನು­ಗಾ­ರಿಕೆ ನಡೆಸಿದ ಆರೋ­­ಪದ ಮೇಲೆ ಬಂಧಿತ­ರಾದ 42 ಭಾರ­ತೀಯ ಮೀನು­ಗಾ­ರರನ್ನು ಬಿಡು­ಗಡೆ ಮಾಡಲು ಇಲ್ಲಿನ ನ್ಯಾಯಾ­ಲಯ ಬುಧ­ವಾರ ಆದೇಶ ಹೊರಡಿ­ಸಿದೆ.ಈ ಹಿನ್ನೆಲೆಯಲ್ಲಿ ಭಾರತದ ಮೀನು­ಗಾರರನ್ನು ಬಿಡುಗಡೆ ಮಾಡ­ಲಾಗಿದೆ. 17 ಮೀನುಗಾರರ ಪ್ರತಿನಿಧಿಗಳು ಮತ್ತು 11 ಅಧಿ­ಕಾರಿಗಳ ಭಾರತೀಯ ನಿಯೋಗ ಮಾತುಕತೆಯಲ್ಲಿ ಭಾಗವಹಿ­ಸುತ್ತಿದೆ ಎಂದು ಶ್ರೀಲಂಕಾ ಮೀನುಗಾರಿಕೆ ಸಚಿ­ವಾ­ಲಯದ ವಕ್ತಾರ ನರೇಂದ್ರ ರಾಜಪಕ್ಸೆ ತಿಳಿಸಿದ್ದಾರೆ.

ಒಪ್ಪಂದ ಉಲ್ಲಂಘನೆ: ಆರೋಪಉಲ್ಲಂಘಿಸಿ ಮೀನುಗಾರಿಕೆ ನಡೆಸುವು­ದನ್ನು ತಮಿಳು­ನಾಡು ಸರ್ಕಾರ ಪ್ರೋತ್ಸಾ­ಹಿಸುತ್ತಿದೆ’ ಎಂದು ಶ್ರೀಲಂಕಾ ಮೀನುಗಾ­ರಿಕೆ ಖಾತೆಯ ರಾಜ್ಯ ಸಚಿವ ಶರತ್‌ ಕುಮಾರ ಗುಣ­ರತ್ನ ಆಪಾದಿಸಿದ್ದಾರೆ. ‘ರಾಜತಾಂತ್ರಿಕ ಮಾರ್ಗದ ಮೂಲಕ ಭಾರತ ಸರ್ಕಾರದೊಂದಿಗೆ ಈ ವಿವಾದ ಬಗೆಹರಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿ­ದ್ದೇವೆ’ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.