43 ಅಡಿಗೆ ವಿಸ್ತರಿಸಲು ನಿರ್ಧಾರ

7

43 ಅಡಿಗೆ ವಿಸ್ತರಿಸಲು ನಿರ್ಧಾರ

Published:
Updated:

ಕಳಸ: ಪಟ್ಟಣದ ಮುಖ್ಯ ರಸ್ತೆಯನ್ನು 43 ಅಡಿಯಷ್ಟು ಅಗಲಕ್ಕೆ ವಿಸ್ತರಿಸುವ ಬಗ್ಗೆ ಭಾನುವಾರ ತೀರ್ಮಾನ ತೆಗೆದುಕೊಳ್ಳ ಲಾಯಿತು.ದುರ್ಗಾ ಮಂಟಪದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಮತ್ತು ಜನಪ್ರತಿನಿಧಿಗಳು ರಸ್ತೆ ವಿಸ್ತರಣೆ ಸಹಕಾರ ನೀಡುವಂತೆ ನೂತನ ರಸ್ತೆಯಿಂದ ಬಾಧಿತ ರಾಗುವವರಲ್ಲಿ ಮನವಿ ಮಾಡಿದರು. ರಸ್ತೆ ಈಗಾಗಲೇ 33 ಅಡಿ ಅಗಲ ಇದ್ದು ಎರಡೂ ಕಡೆ ತಲಾ 5 ಅಡಿ ವಿಸ್ತರಿಸಿದರೆ 43 ಅಡಿ ಅಗಲದ ಸುಗಮವಾದ ರಸ್ತೆ ನಿರ್ಮಾಣ ಸಾಧ್ಯ ಎಂದು ತಾ.ಪಂ.ಸದಸ್ಯ ಶೇಷಗಿರಿ ಗಮನ ಸೆಳೆದರು.ಕಾಂಗ್ರೆಸ್ ಮುಖಂಡ ಎನ್.ಎಂ.ಹರ್ಷ ಮಾತನಾಡಿ, ರಸ್ತೆ ವಿಸ್ತರಣೆಗೆ ಮುನ್ನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು. ಬದಲಿ ಪೈಪ್‌ಲೈನ್ ವ್ಯವಸ್ಥೆ ಮಾಡಬೇಕು ಮತ್ತು ಕಾಂಕ್ರೆಟ್ ರಸ್ತೆಯ ಎರಡೂ ಬದಿ ಉಳಿಯುವ ತಲಾ ಒಂದು ಮೀಟರ್ ಪ್ರದೇಶದಲ್ಲಿ ಡಾಂಬರೀಕರಣಕ್ಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಶಾಸಕರು ಸ್ಪಷ್ಟ ಭರವಸೆ ನೀಡಬೇಕು ಎಂದರು.ಜೆಡಿಎಸ್ ಮುಖಂಡ ಮಂಜಪ್ಪಯ್ಯ ಮಾತನಾಡಿ, ಕೈಮರದಿಂದ ಗಣಪತಿಕಟ್ಟೆ ಯವರೆಗೂ ರಸ್ತೆ ವಿಸ್ತರಣೆ ಅಗತ್ಯ ಇದೆ ಎಂದು ಪ್ರತಿಪಾದಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಬ್ದುಲ್ ಶುಕೂರ್, ರವಿ ರೈ, ಶ್ರೇಣಿಕ ಮತ್ತಿತರರು ರಸ್ತೆ ವಿಸ್ತರಣೆ ಮಾಡದಿದ್ದರೆ ಶಾಲಾ ಮಕ್ಕಳ ಸಂಚಾರ ಮತ್ತು ವಾಹನಗಳ ನಿಲುಗಡೆಗೆ ಭಾರಿ ಅನಾನುಕೂಲ ಉಂಟಾಗುತ್ತದೆ ಎಂದರು.ವ್ಯಾಪಾರಿ ರಾಘವೇಂದ್ರ ಭಟ್ ಮಾತನಾಡಿ, ರಸ್ತೆ ವಿಸ್ತರಣೆಯಿಂದ ವ್ಯಾಪಾರ ಮತ್ತು ವಾಹನ ನಿಲುಗಡೆಗೆ ಅನುಕೂಲ ಇದೆ. ನಾಳೆಯೇ ತಮ್ಮ ಅಂಗಡಿಯ ಮುಂಭಾಗ 5 ಅಡಿ ಉದ್ದಕ್ಕೂ ಸ್ಥಳವನ್ನು ತೆರವು ಮಾಡಿಕೊಡುತ್ತೇನೆ ಎಂದರು.  ವ್ಯಾಪಾರಿ ಸತೀಶ್, ಪಟ್ಟಣದ ಎಲ್ಲ ರಸ್ತೆಗಳನ್ನೂ ಅಗಲ ಮಾಡಿದರೆ ಊರಿಗೆ ಸುಂದರ ರೂಪ ಬರುತ್ತದೆ ಎಂದು ಅಭಿಪ್ರಾಯಪಟ್ಟರು.   ಸಿ.ಪಿ.ಐ. ಮುಖಂಡ ಗೋಪಾಲ ಶೆಟ್ಟಿ, ಕೆ.ಎಂ. ರಸ್ತೆಯ ವಿಸ್ತರಣೆಯೂ ಈಗಲೇ ಆಗಬೇಕು ಎಂದು ಒತ್ತಾಯಿಸಿದರು. ಪಟ್ಟಣದ ಮುಖ್ಯ ರಸ್ತೆಯನ್ನು ಕೈಮರದಿಂದ ಗಣಪತಿಕಟ್ಟೆಯವರೆಗೂ 43 ಅಡಿಯಷ್ಟು ಅಗಲಕ್ಕೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ರಸ್ತೆಯ ಮಧ್ಯಭಾಗದಲ್ಲಿ ಗುರುತು ಮಾಡಿ ಅಲ್ಲಿಂದ ಎರಡೂ ಬದಿಗೆ ಇಪ್ಪ ತ್ತೊಂದೂವರೆ (21.5) ಅಡಿ ಅಗಲಕ್ಕೆ ರಸ್ತೆ ವಿಸ್ತರಣೆ ಮಾಡುವ ಬಗ್ಗೆ ಶಾಸಕ ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಸಭೆಯ ನಂತರ ಶಾಸಕರ ನೇತೃತ್ವದಲ್ಲಿ ರಸ್ತೆಗಾಗಿ ನಿಗದಿಪಡಿಸಲಾಗುವ ಪ್ರದೇಶ ವನ್ನು ಗುರುತು ಮಾಡಲಾಯಿತು.ಪಟ್ಟಣದ ಮುಖಂಡರಾದ ಕೆ.ಕೆ.ಬಾಲ ಕೃಷ್ಣ ಭಟ್, ವೆಂಕಟಸುಬ್ಬಯ್ಯ, ಮಮ್ತಾಜ್ ಬೇಗಂ, ವಿಶ್ವನಾಥ ರಾವ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry