43 ಸಾವು, 174 ಜನರಿಗೆ ಗಾಯ

ಕೀವ್ (ಐಎಎನ್ಎಸ್): ಉಕ್ರೇನ್ನ ಕಪ್ಪು ಸಮುದ್ರ ಪಟ್ಟಣವೆಂದೇ ಪ್ರಸಿದ್ಧಿಯಾದ ಒದೆಸ್ಸಾದಲ್ಲಿ ಸರ್ಕಾರಿ ಪರ ಮತ್ತು ವಿರೋಧಿಗಳ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ 43 ಜನರು ಮೃತಪಟ್ಟಿದ್ದು, 174 ಜನರು ಗಾಯಗೊಂಡಿದ್ದಾರೆ.
ಮೃತಪಟ್ಟವರಲ್ಲಿ ಹೆಚ್ಚಿನವರು ರಷ್ಯಾಪರ ಪ್ರತಿಭಟನಾಕಾರರು. ಟ್ರೇಡ್ ಯೂನಿಯನ್ ಕಟ್ಟಡಕ್ಕೆ ಮೂಲಭೂತವಾದಿಗಳು ಬೆಂಕಿ ಹಚ್ಚಿ ದ್ದರಿಂದ 30 ಜನರು ಮೃತಪಟ್ಟಿದ್ದಾರೆ. ಬೆಂಕಿಹೊತ್ತಿದ್ದ ಹಾರಿ ಎಂಟು ಜನರು ಜೀವಕಳೆದು ಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಉಕ್ರೇನ್ನ ಕಟ್ಟಾ ರಾಷ್ಟ್ರೀಯವಾದಿ ಮತ್ತು ರಷ್ಯಾ ಪರ ಉಗ್ರರ ಗುಂಪಿನ ನಡುವಿನ ಸಂಘರ್ಷದಲ್ಲಿ ಗಾಯ ಗೊಂಡ 10 ಪೊಲೀಸ್ ಸಿಬ್ಬಂದಿ ಸೇರಿ ದಂತೆ 50 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಒದೆಸ್ಸಾದಲ್ಲಿ ಸ್ಥಳೀಯ ಆಡಳಿತ ಮೂರು ದಿನಗಳ ಕಾಳ ಶೋಕಾಚರಣೆ ಘೋಷಿಸಿದೆ.
ಖಾರ್ಬೋವ್ನ ಪೂರ್ವಭಾಗದ ಪಟ್ಟಣದಿಂದ ಫುಟ್ಬಾಲ್ ಅಭಿಮಾನಿ ಗಳು ಮತ್ತು ಬಲಪಂಥೀಯ ಮೂಲ ಭೂತವಾದಿಗಳು ಕೀವ್ ಪಟ್ಟಣಕ್ಕೆ ಬಂದಿದ್ದಾಗ ಈ ಸಂಘರ್ಷ ನಡೆದಿದೆ ಎಂದು ರಷ್ಯಾ ಸುದ್ದಿಸಂಸ್ಥೆ ‘ಇಟಾರ್ ಟಾಸ್’ ವರದಿ ಮಾಡಿದೆ.
ಸಂಘರ್ಷದಲ್ಲಿ ಎರಡು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಕ್ಷಿಪಣಿ ಬಳಸಿ ಹೆಲಿಕಾಪ್ಟರ್ ಅನ್ನು ನಾಶ ಮಾಡಲಾಗಿದೆ. ಈ ಕೃತ್ಯ ಸಾಮಾನ್ಯ ಜನರಿಂದ ಮಾಡಲು ಸಾಧ್ಯವಿಲ್ಲ. ಇದನ್ನು ಶಸ್ತ್ರಸಜ್ಜಿತ ಮತ್ತು ತರಬೇತಿ ಪಡೆದ ಉಗ್ರರೇ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸ್ಲೊವ್ಯಾನ್ಸಕ್ನಲ್ಲಿನ ಸೇನಾ ಕಾರ್ಯಾಚರಣೆ ಜಿನಿವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ರಷ್ಯಾ ಹೇಳಿದೆ.
ಒಎಸ್ಸಿಇ ತಂಡದ ಸದಸ್ಯರ ಬಿಡುಗಡೆ
ಸ್ಲೊವ್ಯಾನ್ಸಕ್ (ಉಕ್ರೇನ್) (ಎಎಫ್ಪಿ): ರಷ್ಯಾ ಪರ ಉಗ್ರರು ಪೂರ್ವ ಉಕ್ರೇನ್ನಲ್ಲಿ ಬಂಧಿಸಿಟ್ಟಿದ್ದ ಯುರೋಪ್ನ ಭದ್ರತೆ ಮತ್ತು ಸಹಕಾರ ಸಂಘಟನೆ (ಒಎಸ್ಸಿಇ) ತಂಡದ ಸದಸ್ಯರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಸ್ಲೊವ್ಯಾನ್ಸಕ್್ ಪಟ್ಟಣದಲ್ಲಿ ವಾರಕ್ಕೂ ಹೆಚ್ಚು ಕಾಲದಿಂದ ಈ ತಂಡವನ್ನು ಒತ್ತೆ ಒಡಲಾಗಿತ್ತು ಎಂದು ಗುಂಪೊಂದು ಹೇಳಿದೆ.
ಏಳು ಐರೋಪ್ಯ ಸೇನಾ ವೀಕ್ಷಕರ ಬಿಡುಗಡೆ ಮಾಹಿತಿಯನ್ನು ದೃಢಪಡಿಸಿರುವ ಒಎಸ್ಸಿಇ ಈ ಕುರಿತು ತನ್ನ ಅಧಿಕೃತ ಟಿಟ್ವರ್ನಲ್ಲಿ ಮಾಹಿತಿ ಬಹಿರಂಗಪಡಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.