ಭಾನುವಾರ, ಡಿಸೆಂಬರ್ 8, 2019
25 °C

45ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಪತಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

45ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಪತಿ !

ಬೆಂಗಳೂರು: ಜೆ.ಪಿ.ನಗರದಲ್ಲಿ ಶುಕ್ರವಾರ ಪತ್ನಿಯನ್ನು ಕೊಂದು, ನಂತರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸಾಫ್ಟ್‌ ವೇರ್‌ ಎಂಜಿನಿಯರ್‌ ಮಧು­ಸೂದನ್‌, ಪತ್ನಿ ರೂಪಾ  ಅವರಿಗೆ 45ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.‘ರೂಪಾ ಅವರ ಮೈ ಮೇಲೆ 45ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದ ಗುರುತುಗಳಿವೆ. ಅಲ್ಲದೆ, ಮಧುಸೂದನ್‌ ಬೆನ್ನು ಭಾಗದಲ್ಲಿ ಚಾಕುವಿನಿಂದ ಇರಿದಿರುವ ಗುರುತಿದೆ. ರೂಪಾ ಕೂಡ ಮಧುಸೂದನ್‌ಗೆ ಚಾಕುವಿನಿಂದ ಇರಿದಿರುವ ಶಂಕೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಪತಿ ಪತ್ನಿ ಇಬ್ಬರೂ ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿಗಳಾಗಿದ್ದರು. ಇಬ್ಬರಿಗೂ ತಿಂಗಳಿಗೆ ಸುಮಾರು ರೂ.1 ಲಕ್ಷ ಸಂಬಳ ಬರುತ್ತಿತ್ತು. ಇದರಿಂದ ಇಬ್ಬರಿಗೂ ಅಹಂ ಹೆಚ್ಚಾಗಿತ್ತು. ಅಲ್ಲದೆ ಮಧುಸೂದನ್ ಮುಂಗೋಪಿ ಯಾಗಿದ್ದು, ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಶುಕ್ರವಾರ ರೂಪಾ ಅವರ ತಂದೆ ವಿಜಯೇಂದ್ರ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ದಂಪತಿ ಅಲ್ಲಿಗೆ ಹೋಗಬೇಕಿತ್ತು. ಆದರೆ, ಈ ಬಗ್ಗೆ ಆಕ್ಷೇಪ ತೆಗೆದಿದ್ದ ಮಧುಸೂದನ್‌ ಹುಟ್ಟುಹಬ್ಬದ ಆಚರಣೆಗೆ ಬರಲು ನಿರಾಕರಿಸಿದ್ದ. ಈ ವಿಚಾರವಾಗಿ ಜಗಳವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.ರೂಪಾ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ನಂತರ ಮಧುಸೂದನ್‌, ಕಟ್ಟಡದ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆ ನಡೆದಾಗ ಅವರ ಮಗಳು ಸುರಭಿ, ಜೆ.ಪಿ.ನಗರ ಎರಡನೇ ಹಂತದಲ್ಲಿರುವ ಅಜ್ಜಿ ಮನೆಯಲ್ಲಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)