450 ಕೋಟಿ ತೆರಿಗೆ ಪಾವತಿಸಲು ಇನ್ಫಿಗೆ ಆದೇಶ

7

450 ಕೋಟಿ ತೆರಿಗೆ ಪಾವತಿಸಲು ಇನ್ಫಿಗೆ ಆದೇಶ

Published:
Updated:

ನವದೆಹಲಿ (ಪಿಟಿಐ): ತೆರಿಗೆ ವಿನಾಯತಿಯನ್ನು ಅಕ್ರಮವಾಗಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ದೇಶದ ಸಾಫ್ಟ್‌ವೇರ್ ದೈತ್ಯ ಸಂಸ್ಥೆ ‘ಇನ್ಫೋಸಿಸ್’ಗೆ ಆದಾಯ ತೆರಿಗೆ ಇಲಾಖೆ ರೂ 450 ಕೋಟಿ ಪಾವತಿಸುವಂತೆ ಆದೇಶಿಸಿದೆ ಎಂದು ಶುಕ್ರವಾರ ಹಣಕಾಸು ಖಾತೆಯ ರಾಜ್ಯ ಸಚಿವ ಎಸ್.ಎಸ್ ಪಳನಿಮಾಣಿಕ್ಯಂ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.  ‘ಇನ್ಫೋಸಿಸ್’ ತನ್ನ ಸಾಗರೋತ್ತರ ಸೇವೆಗಳನ್ನು, ತಂತ್ರಾಂಶ ರಫ್ತು ಎಂದು ತೋರಿಸಿ ರೂ 450 ಕೋಟಿಗಿಂತಲೂ ಹೆಚ್ಚಿನ ತೆರಿಗೆ ವಿನಾಯಿತಿ ಪಡೆದಿತ್ತು. 2007-08ನೇ ಸಾಲಿನ ತೆರಿಗೆ ವರ್ಷದಲ್ಲಿ ರೂ 657.81ಕೋಟಿ ತೆರಿಗೆ ವಿನಾಯಿತಿ ಘೋಷಿಸಿಕೊಂಡಿತ್ತು, ಆದರೆ ಇದನ್ನು ಇತ್ತೀಚೆಗೆ ಪರಿಷ್ಕರಣೆಗೆ ಒಳಪಡಿಸಿ, ರೂ 456.38 ಕೋಟಿ ಮರು ಪಾವತಿಸಲು ಆದಾಯ ತೆರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ ಎಂದು ಮಾಣಿಕ್ಯಂ ಹೇಳಿದ್ದಾರೆ.ಸಾಗರೋತ್ತರ ತಂತ್ರಾಂಶ ಅಭಿವೃದ್ಧಿ ಕಾರ್ಯಕ್ರಮದಡಿ, ಭಾರತೀಯ ಐಟಿ ಕಂಪೆನಿಗಳು ತಮ್ಮ ಎಂಜಿನೀಯರ್‌ಗಳನ್ನು ಮೂರರಿಂದ ಆರು ತಿಂಗಳ     ಅಲ್ಪಾವಧಿ ಯೋಜನೆಗಳಿಗೆ ಯೂರೋಪ್, ಅಮೆರಿಕ ಮತ್ತಿತರ ದೇಶಗಳಿಗೆ ಕಳುಹಿಸಿಕೊಡುವುದು ಸಾಮಾನ್ಯ. ಆದರೆ, ಈ ರೀತಿಯ ತಂತ್ರಾಂಶ ಅಭಿವೃದ್ಧಿ ಕಾರ್ಯಕ್ರಮಗಳಿಂದ ಮತ್ತು ವಿದೇಶಗಳಲ್ಲಿ ನಿಯೋಜಿಸಲ್ಪಡುವ ತಾಂತ್ರಿಕ ಮಾನವಸಂಪನ್ಮೂಲಗಳಿಂದ ಬರುವ ವರಮಾನ  ತೆರಿಗೆ ವಿನಾಯತಿ ವ್ಯಾಪ್ತಿಯಲ್ಲಿ ಬರುವುದಿಲ್ಲ. 

ಇದನ್ನು ತಂತ್ರಾಂಶ ರಫ್ತು ಎಂದು ತೋರಿಸಿ ತೆರಿಗೆ ವಿನಾಯತಿ ಪಡೆಯಲು ಸಾಧ್ಯವಿಲ್ಲ. ಆದಾಯ ತೆರಿಗೆ ಕಾಯ್ದೆ 1961ರ 10ಎ/10ಬಿ/10ಎಎ ಕಲಂಗಳಲ್ಲಿ ತೆರಿಗೆ ಮುಕ್ತ ರಫ್ತು ವರಮಾನದ ಕುರಿತು ಸ್ವಷ್ಟವಾಗಿ ಹೇಳಲಾಗಿದ್ದು, ಇನ್ಫೋಸಿಸ್ ಘೋಷಿಸಿಕೊಂಡಿರುವ    ತೆರಿಗೆ ವಿನಾಯತಿ ಈ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮಾಣಿಕ್ಯಂ ಹೇಳಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry