` 46 ಲಕ್ಷ ದೋಚಿ ಪರಾರಿಯಾಗಿದ್ದ ಚಾಲಾಕಿ ಚಾಲಕನ ಬಂಧನ

7

` 46 ಲಕ್ಷ ದೋಚಿ ಪರಾರಿಯಾಗಿದ್ದ ಚಾಲಾಕಿ ಚಾಲಕನ ಬಂಧನ

Published:
Updated:

ನವದೆಹಲಿ (ಐಎಎನ್‌ಎಸ್‌): ಎಟಿಎಂಗಳಿಗೆ ಹಣ ತುಂಬಲು ಹೋಗುತ್ತಿದ್ದ  ವಾಹನದಿಂದ ` 46 ದೋಚಿ ಪರಾರಿಯಾಗಿದ್ದ ಚಾಲಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನ ಬಳಿ ಇದ್ದ ` 46ವಶಕ್ಕೆ ಪಡೆದುಕೊಂಡಿದ್ದಾರೆ.ಸತೀಶ್‌ (30) ಬಂಧಿತ ಆರೋಪಿ. ಈತ ಕ್ಯಾಷ್‌ ಮ್ಯಾನೇಜ್‌ಮೆಂಟ್‌ ಸರ್ವಿಸ್‌ ಎಂಬ ಖಾಸಗಿ ಸಂಸ್ಥೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.  ಸಂಜಯ್‌ ಎಂಬ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ನೀಡಿ  ಕೆಲಸಕ್ಕೆ ಸೇರಿದ್ದ. ಆರೋಪಿಯು ಬುಧವಾರ ಸುಮಾರು 10.50ರ ವೇಳೆಗೆ ಕೇಂದ್ರ ದೆಹಲಿಯ ಕರೋಲ್‌ ಬಾಗ್‌ ಪ್ರದೇಶದಿಂದ ಹಣ ದೋಚಿ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಆತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry