ಗುರುವಾರ , ಅಕ್ಟೋಬರ್ 17, 2019
21 °C

46 ಸಾವಿರ ದೇವದಾಸಿಯರು: ಸರೋಜಿನಿ

Published:
Updated:

ಹಾಸನ: `ಹಿಂದುಳಿದ ಹಾಗೂ ನಿರ್ಗತಿಕ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅನೇಕ ಯೋಜನೆ ರೂಪಿಸಿದೆ~ ಎಂದು ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ ತಿಳಿಸಿದರು.ಮಂಗಳವಾರ ಹಾಸನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, `ಮಹಿಳೆಯರ ಆರ್ಥಿಕ  ಹಾಗೂ ಸಾಮಾಜಿಕ ಅಭಿವೃದ್ಧಿಗೆ ಇಲಾಖೆ ಹಲವು ಯೋಜನೆ ರೂಪಿಸಿದ್ದು, ಉದ್ಯೋಗಿನಿ ಯೋಜನೆಯಡಿ, ಈ ಬಾರಿ ಡಿಸೆಂಬರ್ ಅಂತ್ಯದವರೆಗೆ 114 ಫಲಾನುಭವಿಗಳಿಗೆ 10.10 ಲಕ್ಷ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಪ.ಜಾತಿ/ಪಂಗಡ ಹಾಗೂ ಇತರು ಸೇರಿದ್ದಾರೆ ಎಂದರು.ಉದ್ಯೋಗಿನಿ ಯೋಜನೆಯಡಿ ಸ್ತ್ರಿಶಕ್ತಿ ಸಂಘಗಳು ಸಾಲ  ಪಡೆಯುವಲ್ಲಿ ಹಾಗೂ ಮರುಪಾವತಿಯಲ್ಲಿ ಮುಂದಿದ್ದಾರೆ, ಇದರಿಂದ ಬ್ಯಾಂಕುಗಳು ಸಹ ಅಭಿವೃಧ್ದಿ ಯಾಗುತ್ತಿವೆ. ಸ್ತ್ರಿಶಕ್ತಿ ಸಂಘಗಳ ಮೂಲಕ ನಾನಾ ಯೋಜನೆ ವಿಸ್ತರಣೆ ಮಾಡಿ ನೇರವಾಗಿ ನಿಗಮಕ್ಕೆ ಬಂಡವಾಳ ಬರುವಂತೆ ಮಾಡುವ ಉದ್ದೇಶವಿದೆ ಮತ್ತು ಶೇ 6ರ ಬಡ್ಡಿ ದರದಲ್ಲಿ ಸಾಲಯೋಜನೆಯನ್ನು ಸಹ ರೂಪಿಸಲಾಗಿದೆ ಎಂದರು.ಮಾಸಿಕ ರೂ. 400ರ ಮಾಸಾಶನ ನೀಡಲು ರಾಜ್ಯದ 26 ಸಾವಿರ ದೇವದಾಸಿಯರನ್ನು ಗುರುತಿಸಲಾಗಿತ್ತು, ಈಚೆಗೆ ಹೂಸದಾಗಿ ಸರ್ವೆ ಮಾಡಲಾಗಿ ಈ ಸಂಖ್ಯೆ ಈಗ 46ಸಾವಿರ ತಲುಪಿದೆ. ದೇವದಾಸಿ ಮಹಿಳೆಯರ ಅರ್ಥಿಕ ಪ್ರಗತಿ ಹಾಗೂ ಆರೋಗ್ಯ ದೃಷ್ಟಿಯಿಂದ ನಾನಾ ತರಬೇತಿ, ಜಾಗೃತಿ ಕಾರ್ಯಕ್ರಮ ಮತ್ತು ಚಿಕಿತ್ಸಾ ಶಿಬಿರಗಳನ್ನು ರೂಪಿಸಲಾಗುತ್ತಿದೆ. ತರಬೇತಿ ವೇಳೆ   ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು            ಮಾರಾಟದ ಮೂಲಕ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಲು ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.ಈಚೆಗೆ ಗ್ರಾಮಗಳ್ಲ್ಲಲೂ ಅವಿಭಕ್ತ ಕುಟುಂಬದಲ್ಲಿ ಸಮನ್ವಯತೆ ಕೂರತೆಯಾಗಿ ವಿಚ್ಛೇದನ, ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಗಮವು ಈ ನಿಟ್ಟಿನಲ್ಲಿ ಗ್ರಾಮಸಭೆ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು , ಅನೇಕ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ಸರೋಜಿನಿ ಭಾರದ್ವಾಜ ತಿಳಿಸಿದರು.ನಿಗಮಕ್ಕೆ ಸರ್ಕಾರ ನೈಸ್ ರಸ್ತೆ ಬಳಿ ನಿವೇಶನ ಮಂಜೂರು ಮಾಡಿದ್ದು, ಬದಲಿ ನಿವೇಶನಕ್ಕೆ ಮನವಿ ಮಾಡಲಾಗಿದೆ ಎಂದು ಸರೋಜಿನಿ ತಿಳಿಸಿದರು.

 

Post Comments (+)