4669 ಮನೆಗಳ ವಿತರಣೆ

7

4669 ಮನೆಗಳ ವಿತರಣೆ

Published:
Updated:

ಗೋಕಾಕ: ಅರಭಾವಿ ವಿಧಾನಸಭ ಮತಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ  `ಬಸವ ವಸತಿ~ ಯೋಜನೆ ಅಡಿ ಒಟ್ಟು 4,469 ಮನೆಗಳನ್ನು ಕಡುಬಡವರಿಗೆ ವಿತರಿಸಲು  ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು   ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು.  ಅರಭಾಂವಿ ವಿಧಾನಸಭಾ ಮತಕ್ಷೇತ್ರದ 30 ಗ್ರಾಮ ಪಂಚಾಯತಿಗಳಲ್ಲಿ ಯಾದವಾಡ ಗ್ರಾ.ಪಂ.ಗೆ 200, ಅವರಾದಿಗೆ 125, ಕುಲಗೋಡಕ್ಕೆ 130, ಢವಳೇಶ್ವರ 100, ಹುಣಶ್ಯಾಳ ಪಿವಾಯ್ 100, ಸುಣಧೋಳಿ 150, ತಳಕಟ್ನಾಳ 150, ಕಳ್ಳಿಗುದ್ದಿ 100, ಕೌಜಲಗಿ 179, ಬೆಟಗೇರಿ 150, ಗೋಸಬಾಳ 100, ಉದಗಟ್ಟಿ 150, ಮೆಳವಂಕಿ 160, ಲೋಳಸೂರ 100, ಬಡಿಗವಾಡ 150, ರಾಜಾಪೂರ 150, ದುರದುಂಡಿ 150, ಅರಭಾಂವಿ 200, ತುಕ್ಕಾನಟ್ಟಿ 150, ಕಲ್ಲೋಳ್ಳಿ 260, ನಾಗನೂರ 260, ಹಳ್ಳೂರ 160, ಶಿವಾಪೂರ(ಹ) 150, ಮುನ್ಯಾಳ 140, ಧರ್ಮಟ್ಟಿ 150, ಮಸಗುಪ್ಪಿ 160, ವಡೇರಹಟ್ಟಿ 150, ಹುಣಶ್ಯಾಳ ಪಿಜಿ 120, ಬಳೋಬಾಳ 125, ಹಾಗೂ ನಲ್ಲಾನಟ್ಟಿ ಗ್ರಾ.ಪಂ.ಗೆ 100 ಮನೆಗಳನ್ನು ಹಂಚಿಕೆ ಮಾಡಲಾಗಿದೆ.  ಎಂದು ತಿಳಿಸಿದ್ದಾರೆ.ಯೋಜನೆ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಲು ಈಗಾಗಲೇ ಸೂಕ್ತ ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಲಾಗಿದೆ. ವಿಶೇಷವಾಗಿ ಕಡುಬಡವರನ್ನು ಫಲಾನುಭವಿಗಳನ್ನಾಗಿ ಗುರುತಿಸಲು ತಮ್ಮ ಕಾರ್ಯಾಲಯದ ಸಿಬ್ಬಂದಿಗಳನ್ನೂ ನೇಮಿಸಲಾಗಿದ್ದು, ದಕ್ಷ ಹಾಗೂ ಪ್ರಾಮಾಣಿಕತೆಯಿಂದ  ತಾರತಮ್ಯ ಮಾಡದೆ ಕಾನೂನಿನ ಚೌಕಟ್ಟಿನಲ್ಲಿ ಮನೆ ಹಂಚಿಕೆ ಮಾಡಲಾಗುವುದು  15 ದಿನಗಳೊಳಗೆ ವಸತಿ ಯೋಜನೆಯ ಫಲಾನುಭವಿಗಳ ಅಂತಿಮ ಯಾದಿಯನ್ನು ತಯಾರಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ  ಸಚಿವರು ಪ್ರಕಟಣೆಯಲ್ಲಿ ತಿಳಿಸಿದಾರೆ.

ಮಧ್ಯವರ್ತಿಗಳಿಗೆ ಹಣ ನೀಡಬೇಡಿಫಲಾನುಭವಿಗಳ ಆಯ್ಕೆಯು ಪ್ರಾಮಾಣಿಕತೆಯಿಂದ ನಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಫಲಾನುಭವಿಗಳ ಆಯ್ಕೆಗೆ ಅಂತಿಮ ಹಂತದ ಪಟ್ಟಿ ಇಷ್ಟರಲ್ಲೇ ಬಿಡುಗಡೆ ಯಾಗಲಿದೆ. ಯಾವುದೇ  ಕಾರಣಕ್ಕೂ ಫಲಾನುಭವಿಗಳು ಮದ್ಯವರ್ತಿಗಳಿಗೆ ಹಣ ನೀಡಬಾರದು.   ವಸತಿರಹಿತ ಬಡ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ.  ಕೆಲವರು ಮನೆಗಳ ಹಂಚಿಕೆ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಯಾವುದೇ ವದಂತಿಗಳಿಗೆ ಆಸ್ಪದ ನೀಡಬಾರದು.   ಬಡವರಿಗೆ ಸೂರು ಕಲ್ಪಿಸಿಕೊಡುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry