ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

48 ಸಾವಿರ ಮಂಜೂರು ; ಕಟ್ಟಿದ್ದು 26 !

Last Updated 19 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ಬಡವರಿಗೆಂದು ಇದುವರೆಗೆ ಮಂಜೂರಾದ ಮನೆಗಳು 48,608. ಆದರೆ ಜಿಲ್ಲಾಡಳಿತದ ವತಿಯಿಂದ ನಿರ್ಮಾಣವಾದ ಮನೆಗಳು ಮಾತ್ರ ಕೇವಲ 26. ಹೀಗಾಗಿ ಫಲಾ ನುಭವಿಗಳಿಗೆ ಮನೆಯ ಕನಸು ನನಸಾಗುವುದು ಇನ್ನೂ ದೂರವೇ ಉಳಿಯುವಂತಾಗಿದೆ.

ಕೆಲವು ತಾಲ್ಲೂಕುಗಳಲ್ಲಿ ಫಲಾನುಭವಿಗಳ ಪಟ್ಟಿಯೇ ಇನ್ನೂ ಅಂತಿಮಗೊಂಡಿಲ್ಲ. ಕೆಲವೆಡೆ ಪಟ್ಟಿ ಸಿದ್ಧವಿದ್ದರೂ ಕಾಮಗಾರಿಗಳು ಕುಂಟು ತ್ತಿವೆ. ಹೀಗಾಗಿ ವಸತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಹಿಂದುಳಿದಿದೆ.

ಆಶ್ರಯ, ಗ್ರಾಮೀಣ ಅಂಬೇಡ್ಕರ್, ಇಂದಿರಾ ಆವಾಸ್, ಬಸವ ವಸತಿ ಯೋಜನೆಗಳ ಅಡಿಯಲ್ಲಿ ಬಡವರಿಗೆಂದೇ ಮನೆಗಳನ್ನು ನಿರ್ಮಿ ಸಲು ಕಳೆದ 3-4 ವರ್ಷಗಳಿಂದಲೂ ಮಂಜೂ ರಾದ ಮನೆಗಳ ನಿರ್ಮಾಣ ಕಾರ್ಯ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಗ್ರಾಮಸಭೆ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಧಿಕಾರಿ ಮತ್ತು ಸ್ಥಳೀಯ ಶಾಸಕರ ನಡುವೆ ಉತ್ತಮ ಸಂವಹನದ ಕೊರತೆ, ರಾಜಕೀಯ ಮೇಲಾಟಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಇದೇ ಏಪ್ರಿಲ್ ಹೊತ್ತಿಗೆ, ಆಶ್ರಯ 7409, ಗ್ರಾಮೀಣ ಅಂಬೇಡ್ಕರ್ ಯೋಜನೆಯ 574, ಇಂದಿರಾ ಆವಾಸ್‌ನ 3458, ಬಸವ ವಸತಿ ಯೋಜನೆಯ 183 ಸೇರಿ ಒಟ್ಟು 11,624 ಮನೆಗಳನ್ನು ನಿರ್ಮಿಸಬೇಕಾಗಿತ್ತು. 2011- 12ನೇ ಸಾಲಿನಲ್ಲಿ ಇಂದಿರಾ ಆವಾಸ್‌ನಲ್ಲಿ 2,808 ಮತ್ತು  ಬಸವ ವಸತಿ ಯೋಜನೆ ಅಡಿ 34.176 ಸೇರಿ ಒಟ್ಟು 36,984 ಮನೆಗಳು ಮಂಜೂರಾಗಿವೆ. ಆದರೆ ಇದುವರೆಗೆ ನಿರ್ಮಾಣವಾಗಿರುವ ಮನೆಗಳ ಸಂಖ್ಯೆ ಕೇವಲ ಆರು ಮಾತ್ರ.

ಆಶ್ರಯ ಯೋಜನೆ ಅಡಿ ಒಂದೇ ಒಂದು ಮನೆಯನ್ನೂ ನಿರ್ಮಿಸಿಲ್ಲ. ಗ್ರಾಮೀಣ ಅಂಬೇಡ್ಕರ್ ಯೋಜನೆ ಅಡಿ 2, ಇಂದಿರಾ ಆವಾಸ್ ಅಡಿ 9, ಬಸವ ವಸತಿ ಯೋಜನೆ ಅಡಿ 15 ಸೇರಿ ಒಟ್ಟು 26 ಮನೆಗಳು ಮಾತ್ರ ನಿರ್ಮಾಣವಾಗಿವೆ.

ಇನ್ನು ಉಳಿದ ಮನೆಗಳ ನಿರ್ಮಾಣ ಕಾರ್ಯ ಯಾಕೆ ಸಮರ್ಪಕವಾಗಿ ನಡೆದಿಲ್ಲ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವೂ ದೊರೆತಿಲ್ಲ. ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿ ವಾಸಾಚಾರಿಯವರಿಗೆ ಸಮಜಾಯಿಷಿ ನೀಡುವಲ್ಲಿ ಜಿಲ್ಲೆಯ ಐದು ತಾಲ್ಲೂಕಿನ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸೋತಿದ್ದಾರೆ.

ಆಶ್ರಯ: ಯೋಜನೆ ಅಡಿಯಲ್ಲಿ ಜಿಲ್ಲೆಗೆ 2008-09ನೇ ಸಾಲಿನಲ್ಲಿ  10,212 ಮನೆ ಗಳನ್ನು ನಿಗದಿ ಮಾಡಲಾಗಿದೆ. ಅವುಗಳ ಪೈಕಿ, ಇದೇ ಸೆ.ಅಂತ್ಯದ ವೇಳೆಗೆ 6844 ಮನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಎರಡು ವರ್ಷವಾದರೂ ಯೋಜನೆ ಪೂರ್ಣಗೊಂಡಿಲ್ಲ. 3368 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.

400 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಶುರುವೇ ಆಗಿಲ್ಲ ಎಂಬುದು ಗಮನಾರ್ಹ. 808 ಮನೆಗಳ ಛಾವಣಿ ಕೆಲಸ ನಡೆಯುತ್ತಿದೆ. 1380 ಮನೆಗಳು ಪಾಯದಲ್ಲೆ ಉಳಿದಿವೆ. 780 ಮನೆಗಳಿಗೆ ಕಿಟಕಿ-ಬಾಗಿಲು ಇಡುವ ಕೆಲಸ ನಡೆಯುತ್ತಿದೆ. ಸಾಧನೆ ಶೇ.68.89. ಬಿಡುಗಡೆಯಾಗಿರುವ 15.75 ಕೋಟಿಯಲ್ಲಿ 13 ಕೋಟಿಯಷ್ಟು ಹಣ ಮಾತ್ರ ಖರ್ಚಾಗಿದೆ.

ಗ್ರಾಮೀಣ ಅಂಬೇಡ್ಕರ್ : ಈ ಯೋಜನೆ ಯಲ್ಲಿ 2007-08, 08-09ನೇ ಸಾಲಿನಲ್ಲಿ 1224 ಮನೆಗಳು ಮಂಜೂರಾದ್ದು, ಅವುಗಳ ಪೈಕಿ 851 ಮನೆ ಮಾತ್ರ ನಿರ್ಮಾಣ ವಾಗಿದೆ. 373 ಮನೆಗಳು ಪ್ರಗತಿ ಹಂತದಲ್ಲಿವೆ.
25 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಶುರು ವಾಗಿಲ್ಲ. ಬಿಡುಗಡೆ ಯಾಗಿರುವ ರೂ 3.02 ಕೋಟಿಯಲ್ಲಿ ರೂ 2.51 ಕೋಟಿ ಖರ್ಚು ಮಾಡಲಾಗಿದೆ.

ಇಂದಿರಾ ಆವಾಸ್: 2008-09 ರಿಂದ 2009-10ನೇ ಸಾಲಿನಲ್ಲಿ ಜಿಲ್ಲೆಗೆ 6939 ಮನೆಗಳನ್ನು ನಿಗದಿಪಡಿಸಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 3740 ಮನೆಗಳನ್ನು ಪೂರ್ಣ ಗೊಳಿಸಲಾಗಿದೆ.

ಉಳಿದ 3199 ಮನೆಗಳು ಪ್ರಗತಿ ಹಂತದಲ್ಲಿವೆ. 134 ಮನೆಗಳ ನಿರ್ಮಾಣ ಕಾರ್ಯ ಶುರುವೇ ಆಗಿಲ್ಲ. ಸಾಧನೆ ಶೇ.54. ಇದುವರೆಗೆ ರೂ.18.90 ಕೋಟಿ ಬಿಡು ಗಡೆಯಾಗಿದ್ದು, ರೂ.13.19 ಕೋಟಿ ವಿನಿ ಯೋಗಿಸಲಾಗಿದೆ.
2011-12ನೇ ಸಾಲಿಗೆ 2808 ಮನೆಗಳ ಗುರಿ ನಿಗದಿಯಾಗಿದ್ದು, 2044 ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ.

ಬಸವ ವಸತಿ ಯೋಜನೆ: ಈ ಯೋಜನೆ ಅಡಿ 33,849 ಮನೆಗಳನ್ನು ನಿಗದಿಪಡಿಸಿದ್ದು, 6879 ಮನೆಗಳ ನಿರ್ಮಾಣ ನಿರ್ಮಾಣಕ್ಕೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿದೆ.

ಪ್ರಗತಿ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿರುವ ಉಸ್ತುವಾರಿ ಕಾರ್ಯದರ್ಶಿ, ಈ ತಿಂಗಳ ಅಂತ್ಯದೊಳಗೆ ಮನೆಗಳ ನಿರ್ಮಾಣ ಪ್ರಸ್ತಾವನೆಯನ್ನು ಸಿದ್ಧಪಡಿಸಿ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಇನ್ನಾದರೂ ಚಾಲನೆ ದೊರಕುವುದೇ ಎಂಬುದನ್ನು ಕಾದು ನೋಡಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT