ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ಜಿ ಸೇವೆ: ಸಲಹೆ ಆಹ್ವಾನಿಸಿದ ಟ್ರಾಯ್

Last Updated 23 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ `ಟ್ರಾಯ್~ ನಾಲ್ಕನೆಯ ತಲೆಮಾರಿನ ತರಂಗಾಂತರ (4ಜಿ) ಸೇವೆ ಜಾರಿಗೆ ಸಂಬಂಧಿಸಿದಂತೆ ದೂರವಾಣಿ ಕಂಪೆನಿಗಳಿಂದ ಸಲಹೆಗಳನ್ನು ಆಹ್ವಾನಿಸಿದೆ.

ಈಗಾಗಲೇ ಅಂತರರಾಷ್ಟ್ರೀಯ ಮೊಬೈಲ್ ದೂರಸಂವಹನ (ಐಎಂಡಿ)  ಒಕ್ಕೂಟ `4ಜಿ~ ವೇಗ, ಸಾಮರ್ಥ್ಯ ಇತ್ಯಾದಿ ಮಾನದಂಡಗಳನ್ನು ನಿಗದಿಮಾಡಿದೆ. `4ಜಿ~ ಸೇವೆಯಲ್ಲಿ ದತ್ತಾಂಶ ವರ್ಗಾವಣೆ  ವೇಗ ಹೈ ಎಂಡ್ ಮೊಬೈಲ್‌ಗೆ ಪ್ರತಿ ಸೆಕೆಂಡ್‌ಗೆ 100 ಮೆಗಾಬೈಟ್ ಮತ್ತು ಲೊ ಎಂಡ್ ಮೊಬೈಲ್‌ಗಳಿಗೆ 1 ಗಿಗಾ ಬೈಟ್ ಇರಬೇಕೆಂದು  `ಐಎಂಡಿ~ ಸೂಚಿಸಿದೆ.  ದತ್ತಾಂಶ ವರ್ಗಾವಣೆಯ ಕನಿಷ್ಠ ವೇಗ 40 ಮೆಗಾಹರ್ಟ್ಸ್  ಇದ್ದರೆ 4ಜಿ ಸೇವೆ ಜಾರಿಗೊಳಿಸಬಹುದು.  

 ಕಂಪೆನಿಗಳು ತಮ್ಮ ಸಲಹೆಗಳನ್ನು ಸೆಪ್ಟಂಬರ್ 20ರ ಒಳಗೆ ದಾಖಲಿಸಬೇಕು.
 ಗುಣಮಟ್ಟ ಮತ್ತು ವೇಗದಲ್ಲಿ ಎರಡು (2ಜಿ) ಮತ್ತು ಮೂರನೆಯ ತಲೆಮಾರಿನ (3ಜಿ) ತರಂಗಾಂತರ ಸೇವೆಯನ್ನು ಹಿಂದಿಕ್ಕುವ ತಂತ್ರಜ್ಞಾನ `4ಜಿ~.  ಪ್ರತಿ ಸೆಕೆಂಡ್‌ಗೆ   100 ಮೆಗಾಬೈಟ್ ವೇಗದಲ್ಲಿ ದತ್ತಾಂಶ ವರ್ಗಾವಣೆ ಸಾಮರ್ಥ್ಯ ಹೊಂದಿರುವುದರಿಂದ ಬಳಕೆದಾರರು ರೈಲು, ಕಾರು ಮತ್ತು ಇತರೆ ವಾಹನ ಪ್ರಯಾಣದ ನಡುವೆಯೂ ಗರಿಷ್ಠ ವೇಗದ ಅಂತರ್ಜಾಲ ಸೌಲಭ್ಯ ಪಡೆಯಬಹುದು. ಇದು ಇಂಟರ್‌ನೆಟ್ ಪ್ರೊಟೊಕಾಲ್ (ಐಪಿ) ಆಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುತ್ತದೆ.

ಬಹುಮಾಧ್ಯಮ ಸೇವೆಗಳು 4ಜಿ ಸೇವೆಯಲ್ಲಿ 3ಗಿಂತಲೂ ಉತ್ತಮ ಗುಣಮಟ್ಟ ಹೊಂದಿರುತ್ತವೆ.  4ಜಿ ಪೂರ್ವ ತಂತ್ರಜ್ಞಾನಗಳಾದ ವಿ-ಮ್ಯಾಕ್ಸ್ ( ಜಿಅಗಿ) ಮತ್ತು ಎಲ್‌ಟಿಇ ಅಸ್ತಿತ್ವದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT