5ರಂದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭ

7
ಮೈಸೂರು ಮಲ್ಲಿಗೆ, ಸೂರ್ಯನಿಂದ ಚಂದ್ರನೆಡೆಗೆ ಮುಂದುವರಿಕೆ

5ರಂದು ಸಾಂಸ್ಕೃತಿಕ ಕಾರ್ಯಕ್ರಮ ಆರಂಭ

Published:
Updated:

ಮೈಸೂರು: ಈ ಬಾರಿಯ ದಸರಾ ಮಹೋತ್ಸವ­ದ ಸಾಂಸ್ಕೃತಿಕ ಕಾರ್ಯಕ್ರಮ­ಗಳನ್ನು ಹಿರಿಯ ರಂಗಕರ್ಮಿ, ಶತಾಯುಷಿ ಏಣಗಿ ಬಾಳಪ್ಪ ಉದ್ಘಾಟಿಸುವರು.ಅಕ್ಟೋಬರ್‌ 5ರಂದು ಸಂಜೆ 5.30 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದಾ್ಘಟನಾ ಸಮಾರಂಭ ನಗರದ ಅಂಬಾ ವಿಲಾಸ ಅರಮನೆಯಲ್ಲಿ ನಡೆಯಲಿದೆ. ಸಮಾ­ರಂಭ ಮುಗಿದ ನಂತರ ಮಂಜುಳಾ ಪರಮೇಶ್‌ ಹಾಗೂ ತಂಡದಿಂದ ನೃತ್ಯ ಮತ್ತು ಉಸ್ತಾದ್ ಅಲಿ ಅಹ್ಮದ್ ಅವರಿಂದ ಶಹನಾಯ್‌ ವಾದನ ಕಾರ್ಯಕ್ರಮ ಜರುಗಲಿವೆ.ಅಕ್ಟೋಬರ್‌ 13ರವರೆಗೆ ನಗರದ ಅಂಬಾ ವಿಲಾಸ ಅರಮನೆ, ಜಗನ್ಮೋಹನ ಅರಮನೆ, ಪುರಭವನ, ಗಾನಭಾರತೀ ಭವನ, ಕುಪ್ಪಣ್ಣ ಉದಾ್ಯನ ಹಾಗೂ ಚಿಕ್ಕ ಗಡಿಯಾರ ಆವರಣದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ­ಗಳು ನಡೆಯಲಿವೆ.ರಷ್ಯಾದ ಕಲಾವಿದರ ನೃತ್ಯ, ಪುರಭವನದಲ್ಲಿ ನಾಟಕಗಳ ಪ್ರದರ್ಶನ, ಕೇಂದ್ರ ಸಂಸ್ಕೃತಿ ಸಚಿವಾಲಯದ ಕೇರಳ, ನಾಗಪುರ ಹಾಗೂ ತಂಜಾವೂರಿನ ಸಾಂಸ್ಕೃತಿಕ ವಲಯದ ಕಾರ್ಯಕ್ರಮಗಳು ಕಳೆಗಟ್ಟಲಿವೆ.ಇವುಗಳಲ್ಲಿ ಬಿಹು ನೃತ್ಯ, ಕಲರಿ ಪಯಟ್‌, ಅರ್ಜುನ ನೃತ್ಯ, ಪಟಿಯಾನಿ ನೃತ್ಯ, ಸೋಂಗಿಮುಖವಾಟೆ, ಬೊನಾಲು ನೃತ್ಯ, ಬರೇಡಿ ನೃತ್ಯ, ಸಿದಿ್ದ­ಧಮಾಲ್‌, ಭಾಂಗ್ರಾ, ಸಂಭಲ್ಪರಿ , ಮಣಿಪುರಿ ಹಾಗೂ ಕುಸಾನು ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ.‘ಅಂಬಾ ವಿಲಾಸ ಅರಮನೆಯಲ್ಲಿ ನಿತ್ಯ ಸಂಜೆ 5.30 ಗಂಟೆಗೆ ಜಾನಪದ ಕಾರ್ಯಕ್ರಮ, 6 ಗಂಟೆಗೆ ಹೊರ ರಾಜ್ಯದ ಕಲಾವಿದರು, ಸಂಜೆ 6.30 ಗಂಟೆಗೆ ರಾಷ್ಟ್ರಮಟ್ಟದ ಕನ್ನಡದ ಕಲಾವಿ­ದರು, ರಾತಿ್ರ 8 ಗಂಟೆಗೆ ಅಂತರರಾಷ್ಟ್ರೀಯ ಖಾ್ಯತಿಯ ಕಲಾವಿದರು ಕಾರ್ಯಕ್ರಮಗಳನ್ನು ನೀಡುವರು.ಹೀಗೆಯೇ ನಿತ್ಯ ಸಂಜೆ 5.30 ಗಂಟೆಗೆ ಜಗನ್ಮೋಹನ ಅರಮನೆ, ಕಲಾ­ಮಂದಿರ, ಗಾನಭಾರತೀ, ಕುಪ್ಪಣ್ಣ ಉದ್ಯಾನ ಹಾಗೂ ಚಿಕ್ಕಗಡಿಯಾರದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು’ ಎಂದು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪ­ಸಮಿತಿ ಅಧ್ಯಕ್ಷ ಕೆ.ಆರ್.ಮೋಹನ­ಕುಮಾರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಸೂರ್ಯನಿಂದ ಚಂದ್ರನೆಡೆಗೆ: ‘ಅಕ್ಟೋಬರ್‌ 6ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ‘ಸೂರ್ಯನಿಂದ ಚಂದ್ರನೆಡೆಗೆ‘ ಎಂಬ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಕಲಾವಿದರಿಂದ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ರಂಗ ಗೀತೆ, ಜಾನಪದ, ನೃತ್ಯ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಇದಾದ ಮೇಲೆ ಅಂದು ‘ಮೈಸೂರು ಮಲ್ಲಿಗೆ’ ಎಂಬ ಕಾವ್ಯ-–ಕುಂಚ-–ನೃತ್ಯ ಕಾರ್ಯಕ್ರಮ ಕೂಡಾ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ನಡೆಯಲಿದೆ. ಅಲ್ಲದೇ ಪಂಡಿತ್ ಜಸರಾಜ್ ಅವರಿಂದ ಹಿಂದುಸ್ತಾನಿ ಸಂಗೀತ, ಲೂಯಿಸ್ ಬ್ಯಾಂಕ್ ಅವರಿಂದ ಫೂ್ಯಜನ್, ಮುಕ್ತಿಯಾರ್ ಅಲಿ ಅವರಿಂದ ಸೂಫಿ ಸಂಗೀತ, ನಿತ್ಯಶ್ರೀ ಮಹದೇವನ್ ಕರ್ನಾಟಕ ಸಂಗೀತ ಹಾಗೂ ರಿಂಪಾ ಶಿವಾ ಅವರಿಂದ ತಬಲಾ ಕಾರ್ಯಕ್ರಮ ನಡೆಯಲಿವೆ. ಒಟ್ಟು ಕಾರ್ಯಕ್ರಮಗಳ ಸಂಖ್ಯೆ 155’ ಎಂದರು. ಆಯ್ಕೆಯ ಮಾನದಂಡಗಳು: ಕಳೆದ 3 ವರ್ಷಗಳಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರ­ನ್ನು ಪುನಾರಾವರ್ತನೆ ಮಾಡಬಾರದು ಎಂದು ಮಾನದಂಡವನ್ನು ಹಾಕಿಕೊಳ್ಳಲಾಗಿದೆ.ಒಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶೇ 40ರಷ್ಟು ಸ್ಥಳೀಯರಿಗೆ, ಶೇ 30ರಷ್ಟು ಹೊರ ಜಿಲ್ಲೆಯವರಿಗೆ, ಶೇ 20ರಷ್ಟು ರಾಜ್ಯ ಮಟ್ಟದ ಕಲಾವಿದರಿಗೆ ಹಾಗೂ ಶೇ 10ರಷ್ಟು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾವಿದರನ್ನು ಆಯ್ಕೆಮಾಡಲಾಗುತ್ತದೆ. ಅಲ್ಲದೇ ಒಂದೇ ಕಲಾವಿದರ ಕುಟುಂಬದ ಅಥವಾ ಸಂಸ್ಥೆಗೆ ಸಂಬಂಧಪಟ್ಟಂತೆ ಬೇರೆ ಬೇರೆಯವರ ಹೆಸರಿನಲ್ಲಿ ಕಾರ್ಯಕ್ರಮ ನೀಡಬಾರದು ಎಂದು ಸೂಚಿಸಲಾಗಿದೆ. ಕಾರ್ಯಕ್ರಮಗಳನ್ನು ಅಪೇಕ್ಷಿಸಿ ಬಂದ  ಒಟ್ಟು ಅರ್ಜಿಗಳ ಸಂಖ 682.ಪರಿಶೀ­ಲನಾ ಸಮಿತಿ ಆಯ್ಕೆ ಮಾಡಿದ ಕಲಾವಿದರ ಸಂಖ್ಯೆ 171+25’ ಎಂದು ವಿವರಿಸಿದರು.

‘ಸಾಂಸ್ಕೃತಿಕ ಉಪಸಮಿತಿಗೆ ರೂ 88 ಲಕ್ಷ ಅನುದಾನ ನೀಡಲಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅ. 4,5 ಹಾಗೂ 6ರಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯ­ಕ್ರಮ­ಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ ರೂ 1.50 ಕೋಟಿ ಅನುದಾನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೋರಲಾಗಿದೆ’ ಎಂದು ಅವರು ಹೇಳಿದರು.ಉಪವಿಶೇಷಾಧಿಕಾರಿ ಡಾ.ಸಿ.ಜಿ. ಬೆಟಸೂರಮಠ, ಸದಸ್ಯರಾದ ಶಾರದಾ ಸಂಪತ್, ಜಯರಾಮಾಚಾರ್, ಎಂ.ಬಿ.ವಿಶ್ವನಾಥ್, ಎನ್.ಎಸ್.ಗೋಪಿನಾಥ್, ಲಲಿತಾ, ಎಚ್.ವಿ. ಸುರೇಶ್, ನಾಗಭೂಷಣ ತಿವಾರಿ, ಮೂಗುರು ನಂಜುಂಡಸ್ವಾಮಿ, ಡಾ. ಸುರವಿ ಶಂಕರ್, ಕೆ.ಪಿ.ಸುರೇಶ್, ಸಹ­ಕಾರ್ಯದರ್ಶಿ­ಗಳಾದ ನಿರ್ಮಲಾ ಮಠಪತಿ ಎಂ.ಎಸ್. ಮರಿಸ್ವಾಮಿಗೌಡ ಹಾಜರಿದ್ದರು.ಸಿಕ್ಕ ಸೀಮೆಎಣ್ಣೆ– ಅರಮನೆ ನೋಡಿದ ಚಿಣ್ಣರು

ಅಂಬಾ ವಿಲಾಸ ಅರಮನೆಯಲ್ಲಿ ಬೀಡು ಬಿಟ್ಟಿರುವ ಮಾವುತರು ಹಾಗೂ ಕಾವಾಡಿಗಳಿಗೆ ಬುಧವಾರ 100 ಲೀಟರ್‌ ಸೀಮೆಎಣ್ಣೆ ಲಭಿಸಿದೆ. ಕಾಡಿನಿಂದ ತಂದ ಸೌದೆ ಮುಗಿಯುತ್ತಿರುವುದರಿಂದ ಸೀಮೆಎಣ್ಣೆ ಬೇಕೆಂದು ಮಂಗಳವಾರ ಶಾಸಕ ಎಂ.ಕೆ. ಸೋಮಶೇಖರ್‌ ಅವರ ಬಳಿ ಮಾವುತರು ಹಾಗೂ ಕಾವಾಡಿಗಳು ಬೇಡಿಕೆ ಸಲ್ಲಿಸಿದ್ದರು. ಟೆಂಟ್‌ ಶಾಲೆಯಲ್ಲಿ ಕಲಿಯುತ್ತಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ಬುಧವಾರ ಅರಮನೆ ವೀಕ್ಷಿಸಿದರು. ಶಿಕ್ಷಕಿಯರಾದ ನೂರ್‌ಫಾತಿಮಾ ಹಾಗೂ ಶಮೀಂ ಅವರು ಮಕ್ಕಳನ್ನು ಕರೆದುಕೊಂಡು ಹೋಗಿ ಅರಮನೆಯನ್ನು ತೋರಿಸಿದರು.ಕೈದಿಗಳ ಮಳಿಗೆ

ದಸರಾ ವಸು್ತಪ್ರದರ್ಶನದಲ್ಲಿ ನಗರದ ಕೇಂದ್ರ ಕಾರಾಗೃಹದ ಕೈದಿಗಳ ಮಳಿಗೆಯೂ ಇರಲಿದೆ. ಇದರಲ್ಲಿ ಕೈದಿಗಳೇ ಸಿದ್ಧಗೊಳಿಸುವ ಚಾದರು, ಜಮಖಾನೆ, ಟವೆಲ್‌, ಕರವಸ್ತ್ರ, ಅಂಗಿ, ಮಕ್ಕಳ ಗೊಂಬೆಗಳು ಮಾರಾಟಕ್ಕೆ ಇರುತ್ತವೆ. ಜತೆಗೆ ಬೇಕರಿ ಪದಾರ್ಥಗಳೂ ಮಾರಾಟಕ್ಕೆ ಇರುತ್ತವೆ. ‘ಸಾರ್ವಜನಿಕರು ನಮ್ಮ ಕೈದಿಗಳು ತಯಾರಿಸುವ ವಸ್ತುಗಳನ್ನು ಖರೀದಿಸಿ, ಪ್ರೋತ್ಸಾಸಹಿಸಬೇಕು’ ಎಂದು ನಗರದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎನ್‌. ಜಯಸಿಂಹ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry