ಗುರುವಾರ , ಮೇ 19, 2022
21 °C

5ರಿಂದ `ಫೋಟೋ ಟುಡೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೈಸಲ್ ಇಂಟರ್ಯಾಕ್ಷನ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆ ಇದೇ 5ರಿಂದ 7ರವರೆಗೆ `ಫೋಟೋ ಟುಡೆ' ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನವನ್ನು ನಗರದ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಮನ್ಪೋ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜಶೇಖರ್, ಮೂರು ದಿನಗಳು ನಡೆಯುವ ಈ ವಸ್ತು ಪ್ರದರ್ಶನದಲ್ಲಿ ಛಾಯಾಚಿತ್ರ ಗ್ರಹಣ, ಚಿತ್ರೀಕರಣ (ಫೋಟೋಗ್ರಫಿ, ವಿಡಿಯೋಗ್ರಫಿ) ಹಾಗೂ `ಡಿಜಿಟಲ್ ಇಮೇಂಜಿಂಗ್'ಗೆ ಸಂಬಂಧಿಸಿದ ಅತ್ಯಾಧುನಿಕ ಉಪಕರಣಗಳು ಹಾಗೂ ಹೊಸ ತಂತ್ರಜ್ಞಾನವನ್ನು ಪ್ರದರ್ಶಿಸಲಾಗುತ್ತದೆ ಎಂದರು.ನೂರಕ್ಕೂ ಹೆಚ್ಚು ದೇಶೀಯ  ಹಾಗೂ ವಿದೇಶಿ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿದ್ದು, ಹೊಸ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಬಳಕೆ ಮಾಡುವ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿಲಾಗಿದೆ ಎಂದು ವಿವರಿಸಿದರು.ಇದರೊಂದಿಗೆ `ಸನ್ ಟುಡೆ' ವತಿಯಿಂದ ಒಳಾಂಗಣ ಮತ್ತು ಹೊರಾಂಗಣ ಜಾಹೀರಾತು ಎಕ್ಸ್‌ಪೋ ಹಾಗೂ `ಎಲ್ ಇ ಡಿ ಟುಡೆ' ವತಿಯಿಂದ ಎಲ್ ಇ ಡಿ ತಂತ್ರಜ್ಞಾನ, ಅದರ ಅಳವಡಿಕೆ ಮತ್ತು ಬಳಸುವ ವಿಧಾನವನ್ನು ತಿಳಿಸಿಕೊಡುವ ವಸ್ತು ಪ್ರದರ್ಶವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು. ವಸ್ತು ಪ್ರದರ್ಶನದ ಜೊತೆಗೆ ರಕ್ತದಾನ ಮತ್ತು ಅಂಗಾಂಗ ದಾನ ಶಿಬಿರವನ್ನು ಏರ್ಪಡಿಸಿಲಾಗಿದ್ದು, ಆಸಕ್ತರು ಇದರಲ್ಲಿ ಭಾಗವಹಿಸಬಹುದಾಗಿದೆ. ಮೂರು ದಿನಗಳು ನಡೆಯಲಿರುವ ಪ್ರದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.