ಮಂಗಳವಾರ, ಜನವರಿ 28, 2020
24 °C

5 ತಿಂಗಳ ನಂತರ ಮರಳಿದ ನಾವಿಕ ಸುನೀಲ್‌ ಜೇಮ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕಳೆದ ಐದು ತಿಂಗ­ಳಿಂದ ಟೋಗೊ ಜೈಲಿ­ನಲ್ಲಿ ಬಂದಿ­ಯಾಗಿದ್ದ ಭಾರತದ ನಾವಿಕ ಸುನೀಲ್‌ ಜೇಮ್ಸ್‌ ಅವರು ಶುಕ್ರವಾರ ಇಲ್ಲಿಗೆ ಮರಳಿದ್ದಾರೆ.ಈಚೆಗೆ ನಿಧನ ಹೊಂದಿದ ಜೇಮ್ಸ್‌ ಅವರ ಮಗುವಿನ ಅಂತ್ಯಕ್ರಿಯೆಗೆ ಕುಟುಂಬ ಸದಸ್ಯರು ಸಿದ್ಧತೆ ಮಾಡಿ­ಕೊಂಡ ಬೆನ್ನಲ್ಲೆ ಅವರು ಕುಟುಂಬ ಸೇರಿಕೊಂಡಿದ್ದಾರೆ.ಡಿ.2ರಂದು ಮರಣ ಹೊಂದಿದ 11 ತಿಂಗಳ ಎಳೆ­ಗೂಸಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಾನ­ವೀಯ ನೆಲೆ­ಗಟ್ಟಿನಲ್ಲಿ ಜೇಮ್ಸ್‌ ಅವರನ್ನು ಜೈಲಿ­ನಿಂದ ಬಿಡುಗಡೆ ಮಾಡ­­ಬೇಕೆಂದು ಭಾರ­ತದ ಅಧಿಕಾರಿಗಳು ಕೋರಿ­ದ್ದರು. ಈ ಮನವಿ ಪುರಸ್ಕರಿಸಿದ ಟೋಗೊ ಅಧಿಕಾರಿ­ಗಳು, ಗುರು­ವಾರ ಸುನೀಲ್‌ ಅವರನ್ನು ಬಿಡುಗಡೆ ಮಾಡಿದ್ದರು.ಜೇಮ್ಸ್‌ ಬಿಡುಗಡೆ ಸಂಬಂಧ ಅವರ ಕುಟುಂಬ ಸದಸ್ಯರು ಕಳೆದ ಕೆಲ ದಿನಗ­ಳಿಂದ ಭಾರತದ ಅಧಿಕಾರಿಗಳ ಮೇಲೆ ನಿರಂತ­ರವಾಗಿ ಒತ್ತಡ ಹೇರಿದ್ದರು. ಅಲ್ಲದೇ ಜೇಮ್ಸ್‌ ಅವರ ಪತ್ನಿ ಅದಿತಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದರು.‘ಕಳೆದ 5 ತಿಂಗಳಲ್ಲಿ ಏನೆಲ್ಲ ಘಟಿಸಿ­ದೆಯೋ ಅದು ಭೂತ­ಕಾಲ ಸೇರಿದೆ. ಒಬ್ಬ ತಂದೆಯಾಗಿ ನನ್ನ ಕರ್ತವ್ಯ ನಿರ್ವಹಿ­ಸಲು ಇಲ್ಲಿಗೆ ಬಂದಿ­ದ್ದೇನೆ. ದಯವಿಟ್ಟು ಅದನ್ನು ಗೌರವಿಸಿ’ ಎಂದು ಇಲ್ಲಿನ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೇಮ್ಸ್‌ ಹೇಳಿದರು.

‘ನನ್ನ ಬಿಡುಗಡೆಗೆ ಕಾರಣರಾದ ಪ್ರಧಾನಿ, ಅವರ ಕಚೇರಿ, ಅಕ್ರಾದಲ್ಲಿ­ರುವ ಭಾರತದ ಹೈಕಮಿಷನರ್‌, ಕಾಂಗ್ರೆಸ್‌ ಸಂಸದ ಸಂಜಯ್ ನಿರುಪಮ್‌ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.ಕಡಲ್ಗಳ್ಳರಿಗೆ ನೆರವು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಕ್ಯಾಪ್ಟನ್‌ ಜೇಮ್ಸ್‌ ಅವರನ್ನು ಟೋಗೊ ದ್ವೀಪದ ಅಧಿಕಾರಿ­ಗಳು ಬಂಧಿಸಿದ್ದರು. ಡಿ.2­ರಂದು ಜೇಮ್ಸ್‌ ಅವರು ಜೈಲಿನಲ್ಲಿ­ದ್ದಾಗ ಅವರ ಪುತ್ರ ವಿವಾನ್‌ ಕರುಳಿನ ಸಮಸ್ಯೆಯಿಂದ ಮೃತ­ಪಟ್ಟಿದ್ದ.ಜೇಮ್ಸ್‌ ಅವರು ಮರಳಿ ಬರುವವರೆಗೆ ಅಂತ್ಯ­ಸಂಸ್ಕಾರ ನಡೆಸದಿ­ರಲು ಪಟ್ಟು ಹಿಡಿದ ಕುಟುಂಬ ಸದಸ್ಯರು, ಮಗುವಿನ ದೇಹ­ವನ್ನು ಶವಾಗಾರದಲ್ಲಿ ಇಟ್ಟಿದ್ದರು.

ಪ್ರತಿಕ್ರಿಯಿಸಿ (+)