5 ಪಾಲಿಟೆಕ್ನಿಕ್‌ಗೆ 40 ಕೋಟಿ: ಉದಾಸಿ

7

5 ಪಾಲಿಟೆಕ್ನಿಕ್‌ಗೆ 40 ಕೋಟಿ: ಉದಾಸಿ

Published:
Updated:

ಕಾರ್ಕಳ: `ರಾಜ್ಯದ ಐದು ಪಾಲಿಟೆಕ್ನಿಕ್‌ಗಳಿಗೆ ನಬಾರ್ಡ್ ಯೋಜನೆ ಅಡಿಯಲ್ಲಿ ರೂ.40 ಕೋಟಿ ಮಂಜೂರಾಗಿದ್ದು, ಅದರಲ್ಲಿ ರಾಜ್ಯದ ಉಡುಪಿ, ಕಾರ್ಕಳ. ಬಂಟ್ವಾಳ, ಹರಪನಹಳ್ಳಿ ಮತ್ತು ಬಂಕಾಪುರಗಳಲ್ಲಿ ಸುಸಜ್ಜಿತ ಪಾಲಿಟೆಕ್ನಿಕ್ ಕಟ್ಟಡಗಳು ನಿರ್ಮಾಣವಾಗಲಿವೆ~ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಇಲ್ಲಿ ತಿಳಿಸಿದರು. ಇಲ್ಲಿನ ಸರ್ಕಾರಿ ಮಳಾ ಪಾಲಿಟೆಕ್ನಿಕ್ ನೂತನ ಕಟ್ಟಡ ಕಾಮಗಾರಿಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, `ಕಾರ್ಕಳಕ್ಕೆ ರೂ.8 ಕೋಟಿ ವೆಚ್ಚದಲ್ಲಿ ಮಹಿಳಾ ಪಾಲಿಟೆಕ್ನಿಕ್ ಕಟ್ಟಡ ಹಾಗೂ ರೂ.1 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣವಾಗಲಿದೆ. ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದ್ದು ಕಲಾ, ವಾಣಿಜ್ಯ ವಿಭಾಗಗಳಿಗಿಂತ ವಿಜ್ಞಾನ ವಿಭಾಗಗಳಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗಾವಕಾಶ ಅಧಿಕವಾಗಿದೆ. ಶ್ರದ್ಧೆಯಿಂದ ಕಲಿತರೆ ಅಸಾಧ್ಯವಾದುದು ಏನೂ ಇಲ್ಲ~ ಎಂದರು.ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ, `ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸಹಶಿಕ್ಷಣ ಆರಂಭಿಸಲಾಗುವುದು~ ಎಂದರು.`ಈ ಸಂಬಂಧ ನೂತನ ನೇಮಕಗೊಂಡ ಸಿಬ್ಬಂದಿ ಪೂರೈಸಲಾಗುವುದು. ಇತ್ತೀಚೆಗೆ ಆರಂಭವಾದ 41 ಪಾಲಿಟೆಕ್ನಿಕ್‌ಗಳಿಗೆ ಮೂಲ ಸೌಕರ್ಯ ಒದಗಿಸಲಾಗಲಿಲ್ಲ. ಈಗ 27 ಕಾಲೇಜುಗಳ ಕೆಲಸ ಪೂರ್ಣಗೊಂಡಿದ್ದು ಉಳಿದವು ಪೂರ್ಣವಾಗುತ್ತಿವೆ~ ಎಂದರು.  `ಕಳೆದ ವರ್ಷದಿಂದ ಪಾಲಿಟೆಕ್ನಿಕ್ ಡಿಪ್ಲೋಮ ದವರಿಗೆ ಶೇ.20ರಷ್ಟು ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಎಲ್ಲಾ ವಿಧಾನಗಳಿಂದ ವಿಷಯ ಸಂಗ್ರಹಿಸಿ ಉತ್ತಮ ಫಲಿತಾಂಶ ತಂದುಕೊಡಬೇಕು. ಆಗ ಸರ್ಕಾರದ ಸೌಲಭ್ಯ ಸದುಪಯೋಗವಾಗುತ್ತದೆ~ ಎಂದರು.   ಶಾಸಕ ಎಚ್.ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ಪ್ರತಿಮಾ ಮೋಹನ್, ತಾ.ಪಂ.ಅಧ್ಯಕ್ಷ ಜಯರಾಮ್ ಸಾಲಿಯಾನ್, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು.ತಳವಾರ್, ತಾಂತ್ರಿಕ ಸಹಾಯಕ (ಕಟ್ಟಡ) ಸಿ.ಡಿ.ರಾಮಲಿಂಗಯ್ಯ, ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಎಚ್.ಮೋನಪ್ಪ, ಟಿ.ಪೂಜಾರ್, ಬಡಿಗಾರ್, ವೆಂಕಟಸ್ವಾಮಿ, ಎಸ್. ವಿಜಯ ಕುಮಾರ್, ಸುಭಿಕ್ಷಾ, ರಾಜೇಶ್ವರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry