ಭಾನುವಾರ, ಜನವರಿ 26, 2020
31 °C

5 ಲಕ್ಷ ಟನ್ ರಸಗೊಬ್ಬರ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮುಂಬರುವ ಮುಂಗಾರಿನ ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಉಂಟಾಗಬಾರದೆಂಬ ಉದ್ದೇಶದಿಂದ ಈಗಾಗಲೇ 5 ಲಕ್ಷ ಟನ್‌ಗೂ ಅಧಿಕ ಪ್ರಮಾಣದ ವಿವಿಧ ರಸಗೊಬ್ಬರಗಳನ್ನು ಎಲ್ಲ ಜಿಲ್ಲೆಗಳಲ್ಲೂ ಸಂಗ್ರಹಿಸಿಡಲಾಗಿದೆ~ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಶಾಸಕ ಹಾಲಪ್ಪ ಬಸಪ್ಪ ಆಚಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಹಾವೇರಿ ಗಲಭೆ ನಂತರದಲ್ಲಿ 2008- 09ರ ಸಾಲಿನಿಂದ ಸರ್ಕಾರ, ರಸಗೊಬ್ಬರ ಕಾಪು ದಾಸ್ತಾನು ಯೋಜನೆಯನ್ನು ಮಹಾಮಂಡಳಕ್ಕೆ ವಹಿಸಿತು. ರಾಜ್ಯದ ಒಟ್ಟು ರಸಗೊಬ್ಬರ ಮಾರಾಟದಲ್ಲಿ 2007ರಲ್ಲಿ ಮಹಾಮಂಡಳದ ಪಾಲು ಶೇಕಡಾ 16.48ರಷ್ಟಿತ್ತು, ಈಗ ಶೇ 36ರಷ್ಟು ಆಗಿದೆ. ಇದನ್ನು 2012- 13ರ ಸಾಲಿನಲ್ಲಿ ಶೇ 50ರಷ್ಟು ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ~ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)