ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಕೋಟಿ ವಿಶೇಷ ಅನುದಾನ ಬಿಡುಗಡೆ

Last Updated 10 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಕಳಸ: ರಾಜ್ಯ ಸರ್ಕಾರವು ಮೂಡಿಗೆರೆ ತಾಲ್ಲೂಕಿಗೆ 25 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದು ಆ ಪೈಕಿ 5 ಕೋಟಿ ರೂಪಾಯಿಯನ್ನು ಕಳಸ ಹೋಬಳಿಗೆ ಮೀಸಲಿಡುವುದಾಗಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯದ ವಶಿಷ್ಟಾಶ್ರ ಮದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಿಸಲಾದ ತೂಗು ಸೇತುವೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳಸ ಹೋಬಳಿಯ ಬಹುತೇಕ ಗ್ರಾಮ ಗಳನ್ನು ಶಾಶ್ವತ ಸೇತುವೆ ಮತ್ತು ತೂಗುಸೇತುವೆಗಳ ಮುಖಾಂತರ ಸಂಪರ್ಕಿಸ ಲಾಗಿದೆ. ತೋಟದೂರು ಗ್ರಾಮದ ಕಗ್ಗನಳ್ಳ ಮತ್ತು ಸಂಸೆ ಗ್ರಾಮದ ಸಂಪಾನೆಯಲ್ಲೂ ತೂಗುಸೇತುವೆ ನಿರ್ಮಿಸುವ ಪ್ರಸ್ತಾಪ ಇದೆ ಎಂದು ಶಾಸಕರು ಹೇಳಿದರು.

ಕಳಸ ಹೋಬಳಿಯಲ್ಲಿ ಬಹುತೇಕ ರಸ್ತೆಗಳು ಹಾನಿಗೀಡಾಗಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಮಳೆಗಾಲದ ನಂತರ ಕೆಲ ರಸ್ತೆಗಳ ಕಾಂಕ್ರಿಟೀಕರಣ ಮತ್ತು ಅನೇಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
 
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್ ಮಾತನಾಡಿ, ಮಲೆನಾಡಿನ ಸಾಮಾನ್ಯ ಜನರಿಗೆ ಅನುಕೂಲ ಆಗುವಂತಹ ಯೋಜನೆಗಳಿಗೆ ಮಂಡಳಿ ಆದ್ಯತೆ ನೀಡುತ್ತಿದೆ ಎಂದರು. 65 ಲಕ್ಷ ವೆಚ್ಚದ ತೂಗು ಸೇತುವೆಯಿಂದಾಗಿ ನೂರಾರು ಗ್ರಾಮಸ್ಥರಿಗೆ ಅನುಕೂಲ ಆಗಲಿದ್ದು ಭವಿಷ್ಯದಲ್ಲಿ ಗ್ರಾಮ ಪಂಚಾಯಿತಿಯು ಅದರ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು.

ಜಿ.ಪಂ. ಸದಸ್ಯೆ ಕವಿತಾ ಚಂದ್ರು, ತಾ.ಪಂ. ಸದಸ್ಯರಾದ ಶೇಷಗಿರಿ, ಹಿತ್ಲುಮಕ್ಕಿ ರಾಜೇಂದ್ರ, ಅನ್ನಪೂರ್ಣ, ಗ್ರಾ.ಪಂ. ಅಧ್ಯಕ್ಷ ಭರತ್ ರಾಜ್, ಉಪಾಧ್ಯಕ್ಷೆ ಉಷಾ, ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಹೆಮ್ಮಕ್ಕಿ ಗಿರೀಶ್, ಜಿಲ್ಲಾ ಸಮಿತಿ ಸದಸ್ಯ ವೆಂಕಟಸುಬ್ಬಯ್ಯ, ಸಾಲಿನಮಕ್ಕಿ ಕೃಷ್ಣಮೂರ್ತಿ ಜೋಯಿಸ್, ಗೊಡ್ಲುಮನೆ ರಮೇಶ್‌ಗೌಡ ಮತ್ತಿತರರು ಭಾಗವಹಿದ್ದರು.

ಎರಡು ನೂತನ ಸೇತುವೆಗೆ ಅನುದಾನ: ಮರಸಣಿಗೆ ತಾ.ಪಂ. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹೊಳೆಬಾಗಿಲು-ಯಡೂರು ಬಳಿ ಮತ್ತು ಹೆಮ್ಮಕ್ಕಿ- ಹಡ್ಲುಗದ್ದೆ ಬಳಿ ನಬಾರ್ಡ್ ಅನುದಾನದಲ್ಲಿ ತಲಾ 50 ಲಕ್ಷ ವೆಚ್ಚದಲ್ಲಿ ಎರಡು ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದು ತಾ.ಪಂ. ಸದಸ್ಯ ಹಿತ್ಲುಮಕ್ಕಿ ರಾಜೇಂದ್ರ ತಿಳಿಸಿದ್ದಾರೆ.

ಇದರ ಜೊತೆಗೆ ತಾ.ಪಂ. ಅನುದಾನದಲ್ಲಿ ಮರಸಣಿಗೆ ಕ್ಷೇತ್ರಕ್ಕೆ 7 ಲಕ್ಷ ರೂಪಾಯಿ ಮತ್ತು ವಿಶೇಷ ಘಟಕ ಯೋಜನೆಯಲ್ಲಿ ಬಿಳಗೂರು ಕಾಲೊನಿಗೆ 3.5 ಲಕ್ಷ ರೂಪಾಯಿ ಅನುದಾನ ದೊರೆತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT