ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`5 ಕೋಟಿ ವೆಚ್ಚದಲ್ಲಿ 9 ಕಾಮಗಾರಿ'

Last Updated 25 ಡಿಸೆಂಬರ್ 2012, 7:14 IST
ಅಕ್ಷರ ಗಾತ್ರ

ಸಿದ್ದಾಪುರ: `ನಗರೋತ್ಥಾನ ಯೋಜನೆಯ  ಸಣ್ಣ ಮತ್ತು ಮಧ್ಯಮ ಪಟ್ಟಣದ ಅಭಿವೃದ್ಧಿಯ ಎರಡನೇ ಹಂತದ ಅನುದಾನದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ರೂ 5 ಕೋಟಿ ಮೊತ್ತದಲ್ಲಿ 9 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ತಿಳಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
`ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಿಂದ ನಿರ್ಮಲ ಹೋಟೆಲ್ ಎದುರಿನಿಂದ ಖಾನಾಪುರ-ತಾಳಗುಪ್ಪ ರಸ್ತೆವರೆಗೆ ಕಾಂಕ್ರೀಟಿಕರಣ, ರಾಜಮಾರ್ಗದ ಅಜಂತಾ ಸರ್ಕಲ್‌ನಿಂದ  ಅಶೋಕ ರಸ್ತೆಯ ಸೋಡ ರಾಮಪ್ಪನವರ ಅಂಗಡಿ ಎದುರಿನವರೆಗೆ ಕಾಂಕ್ರೀಟ್‌ಕರಣ, ಅಶೋಕ ರಸ್ತೆ, ಹಣಜಿಬೈಲ್ ತಳಂಜಿಕೇರಿ ರಸ್ತೆ ಕಾಂಕ್ರೀಟ್‌ಕರಣ, ಹೊಸೂರು ಕೆರೆಗುಡ್ಡೆಕೇರಿ ಮುಖ್ಯರಸ್ತೆ ಕಾಂಕ್ರೀಟ್‌ಕರಣ ಮಾತಲಾಗುತ್ತದೆ ಎಂದರು.

ಹೊಸೂರು ಸಂಪೇಕೇರಿ ರಸ್ತೆಗಳ ಡಾಂಬರೀಕರಣ,ಕೊಂಡ್ಲಿ ಮಾರಿಕಾಂಬಾ ನಗರದ ರಸ್ತೆಗಳ ಡಾಂಬರೀಕರಣ, ಚಂದ್ರಗುತ್ತಿ ರಸ್ತೆಯಿಂದ ಹೊನ್ನೇಗುಂಡಿ ಕೊಳಚೆ ಹರಿಯುವ ಮುಖ್ಯ ಚರಂಡಿಗೆ ಆರ್‌ಸಿಸಿ ಗಟಾರ ನಿರ್ಮಾಣ, ಹಾಳದಕಟ್ಟದ ಸೊರಬ ರಸ್ತೆಯಿಂದ ವಾಜಪೇಯಿ ವಸತಿ ನಿವೇಶನಕ್ಕೆಹೋಗುವ  ಮುಖ್ಯರಸ್ತೆಗೆ ಮತ್ತು ಇತರ ಆಂತರಿಕ ರಸ್ತೆಗಳಿಗೆ ಆರ್‌ಸಿಸಿ ಗಟಾರ ನಿರ್ಮಾಣದ ಕಾಮಗಾರಿಗಳನ್ನು ತಲಾ ರೂ 50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ ಹಾಗೂ ದೇವಸ್ಥಾನ ಬೀದಿ, ಪಂಚಾಯಿತಿ ರಸ್ತೆ ಕಾಂಕ್ರೀಟಿಕರಣ ರೂ 1 ಕೋಟಿ ವೆಚ್ಚದಲ್ಲಿ ನಡೆಸಲಾಗುವುದು'  ಎಂದರು.

`ಮೂರು ವರ್ಷಗಳ ಸತತ ಪ್ರಯತ್ನದಿಂದ ಪಡೆದುಕೊಂಡಿರುವ ವಾಜಪೇಯಿ ನಿವೇಶನಗಳ ಪಟ್ಟಾಗಳನ್ನು ಇದೇ 25ರಂದು ಸ್ಥಳೀಯ ಅಜಂತಾ ಸರ್ಕಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 150 ಕುಟುಂಬಗಳಿಗೆ ವಿತರಣೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ  ಅಜಂತಾ ಸರ್ಕಲ್‌ನಲ್ಲಿ ನಿರ್ಮಿಸಲಾಗುವ ವಾಣಿಜ್ಯ ಸಂಕೀರ್ಣದ ಭೂಮಿ ಪೂಜೆ  ನಡೆಯಲಿದೆ'ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ನಾಯ್ಕ, ಸದಸ್ಯರಾದ ಮಾರುತಿ ನಾ
ಯ್ಕ, ಗುರುರಾಜ ಶಾನಭಾಗ, ಕೋದಂಡರಾಮ ರಂಗೈನ್, ವೀಣಾ ಗೌಡರ್, ವಾಣಿ ಬೇಡರ್ ಉಪಸ್ಥಿತರಿದ್ದರು.

ಗ್ರಾಮೀಣ ಜಾನಪದ ಸಮ್ಮೇಳನ 30ರಂದು ಶಿರಸಿ: ಗ್ರಾಮೀಣ ಜಾನಪದ ಸಮ್ಮೇಳನ ಇದೇ 30ರಂದು ತಾಲ್ಲೂಕಿನ ಉಂಚಳ್ಳಿ ಸೇವಾ ಸಹಕಾರಿ ಸಂಘದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಪತ್ರಕರ್ತ ಅಶೋಕ ಹಾಸ್ಯಗಾರ ಕಾರ್ಯಕ್ರಮ ಉದ್ಘಾಟಿಸುವರು. ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಹೆಗಡೆ ಕಬ್ಬೆ, ಸಂಗೀತ ಶಿಕ್ಷಕ ಹಿತೇಂದ್ರ ಶಾಸ್ತ್ರಿ, ಪತ್ರಕರ್ತೆ ಶೈಲಜಾ ಗೋರ‌್ನಮನೆ, ರಂಗಕರ್ಮಿ ವಿಶ್ವೇಶ್ವರ ಹೆಗಡೆ ಕಬ್ಬೆ ಪಾಲ್ಗೊಳ್ಳುವರು.

ಬೆಳಿಗ್ಗೆ11 ಗಂಟೆಯಿಂದ ಜಾನಪದಗೀತೆ, ಹಳ್ಳಿಹಾಡು, ಹಸೆ ರಂಗೋಲಿ ಸ್ಪರ್ಧೆ ಇದೆ. ಮಧ್ಯಾಹ್ನ 2.30ಗಂಟೆಯಿಂದ ಡೊಳ್ಳು ಕುಣಿತ, ಕೋಲಾಟ, ನವಿಲು ಕುಣಿತ, ಮರಕಾಲು ಕುಣಿತ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT