50 ವರ್ಷಗಳ ಹಿಂದೆ

7

50 ವರ್ಷಗಳ ಹಿಂದೆ

Published:
Updated:

ಗುರುವಾರ, 20-1-1961ಕಡಿಮೆ ವೆಚ್ಚದಲ್ಲಿ ಉತ್ತಮ ಶಾಲಾಕಟ್ಟಡಗಳ ನಿರ್ಮಾಣ


ಬೆಂಗಳೂರು, ಜ. 19 - ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಿತಕರವಾದ ಹಾಗೂ ಶಿಕ್ಷಣಕ್ಕೆ ಸರ್ವಸೌಕರ್ಯಗಳಿರುವ ಶಾಲಾ ಕಟ್ಟಡಗಳ ನಿರ್ಮಾಣ ಮಾಡುವ ಪ್ರಶ್ನೆಗಳನ್ನು ಐದು ದಿನಗಳ ಕಾಲ ವಿಚಾರ ಮಾಡಲಿರುವ ಗೋಷ್ಠಿ  ಇಲ್ಲಿ ಆರಂಭವಾಯಿತು.ನೌಕರರ ವೇತನದ ಬಗ್ಗೆ 3 ವಾರಗಳಲ್ಲಿ ನಿರ್ಧಾರ

ಬೆಂಗಳೂರು, ಜ. 19 - ರಾಜ್ಯದ ನೌಕರರ ಸಂಬಳ ಸಾರಿಗೆ ಪುನರ್ ವಿಮರ್ಶೆ ವಿಷಯದಲ್ಲಿ ಶಿಫಾರಸು ಮಾಡಲು ಸರ್ಕಾರ ನೇಮಿಸಿರುವ ಸಮಿತಿಯ ಶಿಫಾರಸುಗಳ ಬಗ್ಗೆ ರಾಜ್ಯ ಸರ್ಕಾರ ಇನ್ನು ಮೂರು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂಭವವಿದೆಯೆಂದು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ವರದಿಗಾರರಿಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry