50 ವರ್ಷಗಳ ಹಿಂದೆ

7

50 ವರ್ಷಗಳ ಹಿಂದೆ

Published:
Updated:

ರಷ್ಯದ ಅಂತರಿಕ್ಷ ನೌಕೆ ಶುಕ್ರನನ್ನು ಮುಟ್ಟದು

ಮಾಸ್ಕೊ, ಫೆ. 20 - ಸೋವಿಯತ್ ಅಂತರಿಕ್ಷ ನೌಕೆಯು ಶುಕ್ರಗ್ರಹವನ್ನು ಮುಟ್ಟಲಾರದೆಂದು ತಾವು ಭಾವಿಸಿರುವುದಾಗಿ ಮಾಸ್ಕೊ ಗ್ರಹವೀಕ್ಷಣಾಲಯದ ಮುಖ್ಯಾಧಿಕಾರಿ ಡಾ. ವಿಕ್ಟರ್ ಬಜಿಕಿನ್ ಇಂದು ಇಲ್ಲಿ ವಿದೇಶೀ ವರದಿಗಾರರೊಡನೆ ಮಾತನಾಡುತ್ತಾ ತಿಳಿಸಿದರು.ಮೊದಲು ಆಕ್ರಮಣ ವಿಸರ್ಜನೆ ಅಗತ್ಯ

ನವದೆಹಲಿ, ಫೆ. 20 - ‘ಭಾರತ - ಚೀಣಾ ಗಡಿ ಬಗ್ಗೆ ನಾವು ಹೇಳುವುದಕ್ಕೆ ಚೀಣಾವು ವಿಸ್ತೃತ ಒಪ್ಪಿಗೆ ನೀಡಿದಲ್ಲಿ ಮಾತ್ರ’ ಗಡಿ ಬಗ್ಗೆ ಮಾತುಕತೆಗೆ ತಾವು ಪೀಕಿಂಗಿಗೆ ಹೊಗುವ ಪ್ರಶ್ನೆ ಉದ್ಭವಿಸುತ್ತದೆಂದು ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರೂರವರು ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry