50 ಶಾಲೆಗಳಲ್ಲಿ ಸಿಬಿಎಸ್‌ಸಿ ಅಂತರರಾಷ್ಟ್ರೀಯ ಪಠ್ಯಕ್ರಮ

7

50 ಶಾಲೆಗಳಲ್ಲಿ ಸಿಬಿಎಸ್‌ಸಿ ಅಂತರರಾಷ್ಟ್ರೀಯ ಪಠ್ಯಕ್ರಮ

Published:
Updated:

ನವದೆಹಲಿ (ಪಿಟಿಐ): ವಿದೇಶದ 26 ಶಾಲೆಗಳಲ್ಲಿ ಅಳವಡಿಸಲಾದ `ಸಿಬಿಎಸ್‌ಸಿ~ಯ ಅಂತರರಾಷ್ಟ್ರೀಯ ಪಠ್ಯಕ್ರಮ ಶೀಘ್ರವೇ ದೇಶದ 50 ಶಾಲೆಗಳಲ್ಲಿ ಲಭ್ಯವಾಗಲಿದೆ.ಈ ಅಂತರರಾಷ್ಟ್ರೀಯ ಪಠ್ಯಕ್ರಮ ಮಕ್ಕಳ ಆಸಕ್ತಿ  ಮತ್ತು ಕೌಶಲ್ಯ ಹೆಚ್ಚಿಸುವಂತ ಹದ್ದಾಗಿದ್ದು, ಜಿನಿವಾ ಮೂಲದ ಅಂತರರಾಷ್ಟ್ರೀಯ ಶೈಕ್ಷಣಿಕ ಮಂಡಳಿ ಇಂಟರ್‌ನ್ಯಾಷನಲ್ ಬಕಾಲ್ಯುರಿಯೇಟ್ (ಐಬಿ) ರೂಪಿಸಿದ ಪಠ್ಯಕ್ರಮಕ್ಕೆ ಹತ್ತಿರವಾಗಿದೆ.  `ಐಬಿ~ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಿಗೆ ಸುಲಭ ಪ್ರವೇಶ ಪಡೆಯಬಹುದಾಗಿದ್ದು, ಭಾರತದಲ್ಲೂ ಇದು ಜನಪ್ರಿಯವಾಗುತ್ತಿದೆ.12ನೇ ತರಗತಿಯ ನಂತರ ವಿದೇಶಕ್ಕೆ ತೆರಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಇತ್ತೀಚೆಗೆ `ಐಬಿ~ ಕೋರ್ಸ್ ಮಾಡುತ್ತಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲು ಪ್ರಾಯೋಗಿಕವಾಗಿ `ಸಿಬಿಎಸ್‌ಸಿ-ಐ~ ಪರಿಚಯಿಸಲಾಗುತ್ತಿದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry