ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಶಾಲೆಗಳಲ್ಲಿ ಸಿಬಿಎಸ್‌ಸಿ ಅಂತರರಾಷ್ಟ್ರೀಯ ಪಠ್ಯಕ್ರಮ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶದ 26 ಶಾಲೆಗಳಲ್ಲಿ ಅಳವಡಿಸಲಾದ `ಸಿಬಿಎಸ್‌ಸಿ~ಯ ಅಂತರರಾಷ್ಟ್ರೀಯ ಪಠ್ಯಕ್ರಮ ಶೀಘ್ರವೇ ದೇಶದ 50 ಶಾಲೆಗಳಲ್ಲಿ ಲಭ್ಯವಾಗಲಿದೆ.

ಈ ಅಂತರರಾಷ್ಟ್ರೀಯ ಪಠ್ಯಕ್ರಮ ಮಕ್ಕಳ ಆಸಕ್ತಿ  ಮತ್ತು ಕೌಶಲ್ಯ ಹೆಚ್ಚಿಸುವಂತ ಹದ್ದಾಗಿದ್ದು, ಜಿನಿವಾ ಮೂಲದ ಅಂತರರಾಷ್ಟ್ರೀಯ ಶೈಕ್ಷಣಿಕ ಮಂಡಳಿ ಇಂಟರ್‌ನ್ಯಾಷನಲ್ ಬಕಾಲ್ಯುರಿಯೇಟ್ (ಐಬಿ) ರೂಪಿಸಿದ ಪಠ್ಯಕ್ರಮಕ್ಕೆ ಹತ್ತಿರವಾಗಿದೆ.

  `ಐಬಿ~ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಿಗೆ ಸುಲಭ ಪ್ರವೇಶ ಪಡೆಯಬಹುದಾಗಿದ್ದು, ಭಾರತದಲ್ಲೂ ಇದು ಜನಪ್ರಿಯವಾಗುತ್ತಿದೆ.

12ನೇ ತರಗತಿಯ ನಂತರ ವಿದೇಶಕ್ಕೆ ತೆರಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಇತ್ತೀಚೆಗೆ `ಐಬಿ~ ಕೋರ್ಸ್ ಮಾಡುತ್ತಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲು ಪ್ರಾಯೋಗಿಕವಾಗಿ `ಸಿಬಿಎಸ್‌ಸಿ-ಐ~ ಪರಿಚಯಿಸಲಾಗುತ್ತಿದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT