ಭಾನುವಾರ, ನವೆಂಬರ್ 17, 2019
25 °C

51 ಮಂದಿ ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆ

Published:
Updated:

ಮದ್ದೂರು: ಪಟ್ಟಣದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿವ್ಯದೃಷ್ಟಿ ಸಂಸ್ಥೆಯ ವತಿಯಿಂದ ಬುಧವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರು 89ನೇತ್ರರೋಗಿಗಳನ್ನು ತಪಾಸಣೆ ನಡೆಸಿ ಅಂತಿಮವಾಗಿ 51ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಗೊಳಿಸಿದರು.ಇದಕ್ಕೂ ಮುನ್ನ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ಶಿಬಿರಕ್ಕೆ ಚಾಲನೆ ನೀಡಿದರು. ದಿವ್ಯದೃಷ್ಟಿ ಸಂಸ್ಥೆ ಅಧ್ಯಕ್ಷ ಅಕ್ಷರಂ ವೆಂಕಟೇಶ್, ಮುಖಂಡರಾದ ಪ್ರೆಸ್‌ನಾಗಪ್ಪ, ವಕೀಲ ಅಶೋಕ್‌ಕುಮಾರ್, ಶಂಕರಕಣ್ಣಿನ ಆಸ್ಪತ್ರೆ ಆಡಳಿತಾಧಿಕಾರಿ ಜಯರಾಮೇಗೌಡ  ಇತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)