ಶುಕ್ರವಾರ, ಜನವರಿ 24, 2020
28 °C

52 ಭಾರತೀಯರ ಗಡೀಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಭಾರತೀಯರೇ ಹೆಚ್ಚಾಗಿ ನೆಲೆಸಿರುವ ಇಲ್ಲಿನ ಲಿಟ್ಲ್ ಇಂಡಿಯಾ ಪ್ರದೇಶದಲ್ಲಿ ಈಚೆಗೆ ನಡೆದ ಗಲಭೆಯಲ್ಲಿ ಭಾಗಿಯಾದ ಆರೋಪ ಹೊತ್ತ 52 ಭಾರತೀಯರ ಗಡೀ­ಪಾರನ್ನು ಶುಕ್ರವಾರ ಜಾರಿ ಮಾಡಿದೆ.ಸರ್ಕಾರ ನೇಮಿಸಿದ ತನಿಖಾ ಸಮಿ­ತಿ 53 ಮಂದಿಯನ್ನು ತಪ್ಪಿತಸ್ಥ­ರೆಂದು ಗುರು­ತಿಸಿದ ನಂತರ 52 ಭಾರತೀಯರ ಗಡೀಪಾರಿಗೆ ಆದೇಶ ಹೊರ­ಬಿದ್ದಿತ್ತು.ಇದೇ ತಿಂಗಳ 8ರಂದು ನಡೆದ 40 ವರ್ಷಗಳಲ್ಲೇ ದೊಡ್ಡದಾದ ಈ ಗಲಭೆ­ಯಲ್ಲಿ ಸುಮಾರು 39 ಪೊಲೀಸರು ಮತ್ತ ಹೋಮ್‌ ಟೀಂ ಅಧಿಕಾರಿಗಳು ಗಾಯಗೊಂಡಿದ್ದರು. ಅಲ್ಲದೆ, 25 ಪೊಲೀಸ್‌ ಮತ್ತು ನಾಗರಿಕ ರಕ್ಷಣಾ ಪಡೆ ವಾಹನ­ಗಳು ಹಾನಿಗೊಂಡಿದ್ದವು.

ಪ್ರತಿಕ್ರಿಯಿಸಿ (+)