ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52 ದೇಶಗಳ 160 ಸಿನಿಮಾ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ರಸಿಕರಿಗೆ ರಸದೌತಣ ನೀಡಲು 6ನೇ ಬೆಂಗ­ಳೂರು ಅಂತರರಾಷ್ಟ್ರೀಯ ಚಲನ­ಚಿತ್ರೋತ್ಸ­ವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, 52 ದೇಶಗಳ 160 ಚಲನ­ಚಿತ್ರಗಳು ಏಳು ಚಿತ್ರ ಮಂದಿರಗಳಲ್ಲಿ ಒಂದು ವಾರ ಪ್ರದರ್ಶನಗೊಳ್ಳಲಿವೆ.

ಡಿ.26ರಂದು ಸಂಜೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಉತ್ಸ­ವದ ಉದ್ಘಾಟನೆಯನ್ನು ಖ್ಯಾತ ಚಲನ­ಚಿತ್ರ ನಟ ಕಮಲ್‌ಹಾಸನ್‌ ನೆರವೇರಿಸ­ಲಿದ್ದಾರೆ. ಡಿ. 27ರಿಂದ ಜ. 2ರವರೆಗೆ ಚಲನಚಿತ್ರಗಳ  ಪ್ರದರ್ಶನಗಳು  ನಡೆಯಲಿವೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಈ ಚಲನ­ಚಿತ್ರೋತ್ಸವವನ್ನು ಆಯೋಜಿಸಿದೆ.
ಏಷ್ಯಾ, ಭಾರತೀಯ, ಕನ್ನಡ ಸಿನಿಮಾ­ಗಳು ಪ್ರತ್ಯೇಕ ಸ್ಪರ್ಧೆಯ ವಿಭಾಗ­ಗಳಲ್ಲಿ ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರಗಳು ಭಾರತೀಯ ಮತ್ತು ಏಷ್ಯಾ ವಿಭಾಗದ ಸ್ಪರ್ಧೆಗಳಲ್ಲೂ ಭಾಗ­ವಹಿಸಲಿವೆ. ಇದೇ ಪ್ರಥಮ ಬಾರಿಗೆ ಪ್ರೇಕ್ಷಕರ ಮನ್ನಣೆಗಳಿಸಿದ ಚಲನಚಿತ್ರ ಪ್ರಶಸ್ತಿಯೊಂದನ್ನು ನೀಡ­ಲಾಗುವುದು ಎಂದು ವಾರ್ತಾ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಲನಚಿತ್ರೋತ್ಸವದ ಕಲಾ ನಿರ್ದೇಶಕ ಎಚ್‌.ಎನ್‌. ನರಹರಿರಾವ್‌ ಮಾತನಾಡಿ,  10 ಕನ್ನಡ ಚಲನಚಿತ್ರಗಳು ಈ ಬಾರಿ ಪ್ರದರ್ಶನ­ಗೊಳ್ಳಲಿವೆ. ‘ಕೊಂಚಾವರಂ’ ಎನ್ನುವ ಬಂಜಾರ ಹಾಗೂ ‘ರಿಕ್ಷಾ ಡ್ರೈವರ್‌’ ಎನ್ನುವ ತುಳು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ಕೊಂಚಾವರಂ ಭಾರತೀಯ ಸಿನಿಮಾ ವಿಭಾಗ ಸ್ಪರ್ಧೆಯ ಪಟ್ಟಿಯಲ್ಲೂ ಇದೆ. ಕನ್ನಡದ ‘ಲೂಸಿಯಾ’ ಚಲನಚಿತ್ರ ಏಷ್ಯಾ ಸಿನಿಮಾ ಸ್ಪರ್ಧೆಯ ಪಟ್ಟಿ­ಯಲ್ಲೂ ಇದೆ ಎಂದು ತಿಳಿಸಿದರು.

ಈ ಬಾರಿ ರೈಲುಗಳ ಆಧಾರಿತ ಐದು ಸಿನಿಮಾಗಳ ವಿಶೇಷ ಪ್ರದರ್ಶನವಿದೆ. ವಿವರಗಳಿಗೆ www.biffes.in ವೆಬ್‌ಸೈಟ್‌ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT