ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52 ಭಾರತೀಯರ ಗಡೀಪಾರು

ಸಿಂಗಪುರ: ಲಿಟ್ಲ್ ಇಂಡಿಯಾದಲ್ಲಿ ನಡೆದ ಹಿಂಸಾಚಾರ ಪ್ರಕರಣ
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ಇಲ್ಲಿನ  ಲಿಟ್ಲ್‌  ಇಂಡಿಯಾದಲ್ಲಿ ನಡೆದ ಗಲಭೆ ಮತ್ತು ಹಿಂಸಾಕೃತ್ಯದಲ್ಲಿ ಪಾಲ್ಗೊಂಡಿದ್ದ ಆಪಾದನೆಗಾಗಿ ಸಿಂಗಪುರ ಸರ್ಕಾರವು 52 ಭಾರತೀಯರನ್ನು ಗಡೀಪಾರು ಮಾಡುವ ಮತ್ತು 28 ಮಂದಿಯ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವ ನಿರ್ಧಾರ ಕೈಗೊಂಡಿದೆ.

ಸಿಂಗಪುರದಲ್ಲಿ ಕಾನೂನು ಸುವ್ಯಸ್ಥೆಗೆ ಭಂಗ ಉಂಟು ಮಾಡುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಟ್ಟುನಿಟ್ಟಿನ ಸಂದೇಶ ನೀಡುವುದು ಸರ್ಕಾರದ ಉದ್ದೇಶ. ಆದ್ದರಿಂದ ಗಲಭೆ ನಡೆಸಿದ ಭಾರತೀಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವ ಟಿವೊ ಛೀ ಹೀನ್‌ ತಿಳಿಸಿದ್ದಾರೆ.

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಲಿಟ್ಲ್‌ ಇಂಡಿಯಾ ಪ್ರದೇಶ­ದಲ್ಲಿ ಡಿಸೆಂಬರ್‌ 8ರಂದು ನಡೆದ ಗಲಭೆಯ ತನಿಖೆಯನ್ನು ಪೊಲೀಸರು ಪೂರ್ತಿಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಪಾದಚಾರಿಯೊಬ್ಬರಿಗೆ ಬಸ್‌ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಹಿಂಸಾಚಾರ ಆರಂಭ ಗೊಂಡಿತ್ತು. ಸುಮಾರು 400 ಮಂದಿ ವಲಸೆ ಕಾರ್ಮಿಕರು ಹಿಂಸಾಚಾರದಲ್ಲಿ ತೊಡಗಿದ್ದರು. ಘಟನೆ ಯಲ್ಲಿ 39 ಪೊಲೀಸರು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದರು. 16 ಪೊಲೀಸ್‌ ಕಾರು ಗಳು ಸೇರಿದಂತೆ 25 ವಾಹನಗಳಿಗೆ ಹಾನಿಯಾಗಿತ್ತು.

1969ರಲ್ಲಿ ನಡೆದಿದ್ದ ಜನಾಂಗೀಯ ಹಿಂಸಾ ಚಾರದ ನಂತರ ಸಿಂಗಪುರದಲ್ಲಿ ತೀವ್ರ ಪ್ರಮಾಣದ ಹಿಂಸಾಚಾರ ನಡೆದದ್ದು ಇದೇ ಮೊದಲು.

28 ಭಾರತೀಯರು ಈ ಹಿಂಸಾ­ಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ­ದ್ದಾರೆ ಎಂದು ಆರೋಪಿಸ ಲಾಗಿದೆ. ಒಬ್ಬ ಬಾಂಗ್ಲಾ­ದೇಶದ ಪ್ರಜೆ ಹಾಗೂ 52 ಭಾರತೀಯರ ವಿರುದ್ಧ ಹಿಂಸಾಚಾರ­ದಲ್ಲಿ ಭಾಗಿ ಯಾದ ಆರೋಪ ಹೊರಿಸ­ಲಾಗಿದೆ. 200 ಜನರಿಗೆ ಪೊಲೀಸರ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗು ವುದು ಎಂದು  ಹೀನ್‌ ಹೇಳಿದ್ದಾರೆ.

53 ಜನರನ್ನು ಸ್ವದೇಶಕ್ಕೆ ಗಡೀಪಾರು ಮಾಡುವು ದಕ್ಕೂ ಮುನ್ನ ವಿಚಾರಣಾ ಸಮಿತಿಯು ಅವರ ವಿಚಾರಣೆ ನಡೆಸಲಿದೆ ಎಂದೂ ಅವರು ತಿಳಿಸಿದ್ದಾರೆ.

ಸಹಿಸಲು ಸಾಧ್ಯವಿಲ್ಲ
ಸಿಂಗಪುರದ ಕಾನೂನು ಸುವ್ಯವಸ್ಥೆಗೆ ಬೆದರಿಕೆ ಒಡ್ಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸುವುದಕ್ಕಾಗಿ ಈ ಕಠಿಣ ನಿರ್ಧಾರಗಳನ್ನು ನಾವು ಕೈಗೊಂಡಿದ್ದೇವೆ

–ಟಿವೊ ಛೀ ಹೀನ್‌, ಸಿಂಗಪುರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT