5300 ಕುಟುಂಬಗಳಿಗೆ ನಿವೇಶನ: ಸಚಿವ ಬಂಡಿ

ಸೋಮವಾರ, ಮೇ 27, 2019
33 °C

5300 ಕುಟುಂಬಗಳಿಗೆ ನಿವೇಶನ: ಸಚಿವ ಬಂಡಿ

Published:
Updated:
5300 ಕುಟುಂಬಗಳಿಗೆ ನಿವೇಶನ: ಸಚಿವ ಬಂಡಿ

ಗದಗ: ಜಿಲ್ಲೆಯ 106 ಗ್ರಾಮ ಪಂಚಾ ಯಿತಿ ವ್ಯಾಪ್ತಿಯ 5300 ಕುಟುಂಬ ಗಳಿಗೆ ನಿವೇಶನ ಸೌಲಭ್ಯ ಕಲ್ಪಿಸ ಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಳಕಪ್ಪ ಬಂಡಿ ಹೇಳಿದರು.ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿ ಯಿಂದ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತ ನಾಡಿದರು.

ಬಸವ ವಸತಿ ಯೋಜನೆ ಯಡಿ 23000 ಹಾಗೂ ಇಂದಿರಾ ಅವಾಸ ಯೋಜನೆಯಡಿ ಗ್ರಾಮೀಣ ಪ್ರದೇಶದ 2650 ಕುಟುಂಬಗಳಿಗೆ ವಸತಿ ನೀಡ ಲಾಗುವುದು.

 

ಮುಖ್ಯಮಂತ್ರಿ ಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಹಾಗೂ 13ನೇ ಹಣಕಾಸು ಯೋಜನೆಯಡಿ ಲಭ್ಯವಾಗುವ ರೂ. 5 ಕೋಟಿ ಅನುದಾನದಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿ ಸಲಾಗುವುದು. ಸುವರ್ಣ ಗ್ರಾಮೋದಯ ಯೋಜನೆಯ ಐದನೇ ಹಂತದಡಿ 27 ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಮೂಲ ಸೌಕರ್ಯಕ್ಕೆ ರೂ.18 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸರ್ವ ಶಿಕ್ಷಣ ಅಭಿಯಾನದ ರೂ.40 ಕೋಟಿ ಅನುದಾನದಡಿ 109 ಪ್ರಾಥಮಿಕ ಶಾಲಾ ಕೊಠಡಿಗಳು ಹಾಗೂ 8 ಮುಖ್ಯ ಶಿಕ್ಷಕರ ಕೊಠಡಿ ಮತ್ತು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂ. 60 ಲಕ್ಷ ವೆಚ್ಚದಲ್ಲಿ 4 ಕೊಠಡಿಗಳ ಹೆಚ್ಚುವರಿ ನಿರ್ಮಾಣ ಕಾರ್ಯ ಸಾಗಿದೆ.ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ ವಿಭಾಗ ಮಟ್ಟದ ತರಬೇತಿ ಕೇಂದ್ರವನ್ನು ನಗರ ದಲ್ಲಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾ ಗುವುದು. ಭಾಗ್ಯಲಕ್ಷ್ಮೀ ಯೋಜನೆಯಡಿ 37969 ಫಲಾನುಭವಿ ಗಳನ್ನು ಗುರುತಿ ಸಿದ್ದು, 28662 ಬಾಂಡ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.ಸ್ವರ್ಣ ಜಯಂತಿ ಗ್ರಾಮ ಸ್ವರೋಜ ಗಾರ ಯೋಜನೆಯಡಿ ಗ್ರಾಮೀಣ ಪ್ರದೇಶದ 215 ಸ್ವಸಹಾಯ ಗುಂಪು ಗಳಿಗೆ 5 ಕೋಟಿ ಸಾಲವನ್ನು ವಿವಿಧ ಬ್ಯಾಂಕುಗಳ ಮೂಲಕ ನೀಡಲಾಗು ವುದು. ಸಕಾಲ ಯೋಜನೆಯಲ್ಲಿ 132731 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ನುಡಿದರು.ಕರ್ನಾಟಕವನ್ನು ಮಾದರಿ ರಾಜ್ಯವ ನ್ನಾಗಿ ಮಾಡಲು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಯಶಸ್ವಿ ಯಾಗಿ ಅನುಷ್ಠಾನಗೊಳಿಸಲು ಜನಪ್ರತಿ ನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಬೆಂಬಲ ಅಗತ್ಯ ವಿದೆ. ಸತ್ಯ, ಅಹಿಂಸೆಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ರಕ್ಷಿಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.ಇದಕ್ಕೂ ಮುನ್ನ ಸಚಿವರು ಪರೇಡ್ ವಿಕ್ಷಣೆ ಮಾಡಿದರು. ಬಳಿಕ ಪಥ ಸಂಚಲ ನದಲ್ಲಿ ಗೌರವ ವಂದನೆ ಸ್ವೀಕರಿಸಿದರು.ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ನಗರಾಭಿವೃದ್ಧಿ ಪ್ರಾಧಿ ಕಾರ ಅಧ್ಯಕ್ಷ ಕೃಷ್ಣ ಹೊಂಬಾಳಿ, ಉಪಾ ಧ್ಯಕ್ಷೆ ಖಮರಸುಲ್ತಾನ್ ಜಿ. ನಮಾಜಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಕುಮಾರ್ ಎಚ್. ನಾಯಕ್, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಸಿಇಒ ವೀರಣ್ಣ ತುರಮರಿ ಹಾಜರಿದ್ದರು.ಸಾಧಕರಿಗೆ ಸನ್ಮಾನ: ಸಮಾಜ ಸೇವೆ, ಕ್ರೀಡೆ, ರಾಜ್ಯ- ರಾಷ್ಟ್ರ ಪ್ರಶಸ್ತಿ ಪಡೆದ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾ ಯಿತು. ದತ್ತಾತ್ರೇಯ ಕುಲಕರ್ಣಿ, ಶ್ರೀಶೈಲಪ್ಪ ಮಲ್ಲೆಶಪ್ಪ ಲಮಾಣಿ (ಸಮಾಜ ಸೇವೆ) ಬಸಮ್ಮಹಂಚಿನಾಳ (ಫ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿ), ಬಾಬು ಎಸ್. ರಾಥೋಡ್ (ಸಿಎಂ ಪದಕ), ಬಸವರಾಜ ಮಾಡೋಳಿ (ಗಣರಾಜ್ಯೋತ್ಸವ ಪರೇಡ), ಸವಿತಾ (ಎನ್‌ಸಿಸಿ ಕೆಡಟ್), ಶರಣು ಬೇಲೆರಿ, ಯುವರಾಜ (ಹಾಕಿ), ಜಗದೀಶ ತಳವಾರ (ಜಿಲ್ಲಾ ಯುವ ಪ್ರಶಸ್ತಿ) ಅವರಿಗೆ ಶಾಲು ಹೊದಿಸಿ ಪ್ರಮಾಣ ಪತ್ರ ನೀಡಿ ಗೌರವಿಸಲಾ ಯಿತು.ಇದೇ ಸಂದರ್ಭದಲ್ಲಿ ಒಂಬತ್ತು ಅಂಗ ವಿಕಲರಿಗೆ ಯಂತ್ರಚಾಲಿತ ಮೋಟಾರ ವಾಹನವನ್ನು  ಹಸ್ತಾಂತರ ಮಾಡಲಾ ಯಿತು.ಜೈ ಹೋ...ಜೈ ಹೋ...

ಗದಗ: ನಗರದ ವಿದ್ಯಾದಾನ ಸಮಿತಿ ಪ್ರೌಢ ಶಾಲೆ ಮಕ್ಕಳು ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜನಪ್ರಿಯ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದರೆ ಇತ್ತ ಗ್ಯಾಲರಿಯಲ್ಲಿ ಕುಳಿತ್ತಿದ್ದ ಪ್ರೇಕ್ಷಕರು ಜೈ ಹೋ ಜೈ ಹೋ ಎಂದು ಧ್ವನಿಗೂಡಿಸಿ ದರು. ಮಕ್ಕಳ ನೃತ್ಯಕ್ಕೆ ಮನಸೋತ ಯುವಕರು ಶಿಳ್ಳೆ ಮತ್ತು ಚಪ್ಪಾಳೆ ಹೊಡೆ ಯುವ ಮೂಲಕ ಮತ್ತಷ್ಟು ಹುರಿದುಂಬಿಸಿದರು.ಬೆಟಗೇರಿಯ ಮಹಾರಾಣಿ ಪ್ರತಾಪ ಪ್ರೌಢಶಾಲೆ ಮಕ್ಕಳು `ಭಾರತ ಮಾತೆ ನಿನ್ನ ಬಂಧನದಿಂದ ಬಿಡಿಸಿದೆವು~ ಗೀತೆಗೆ ಪ್ರದರ್ಶಿಸಿದ ನೃತ್ಯ ಎಲ್ಲರ ಗಮನಸೆಳೆಯಿತು. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಹಾಗೂ ಭಾರತೀಯ ಅನುಭವಿಸಿದ ಕಷ್ಟಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.ಇನ್ನೂ ಬಿಪಿನ್ ಚಿಕ್ಕಟ್ಟಿ ಪ್ರೌಢಶಾಲೆಯ 300 ಮಕ್ಕಳು ಪ್ರದರ್ಶಿಸಿದ ದೇಶ ಭಕ್ತಿ ಗೀತೆ ನೃತ್ಯದಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಪ್ರದರ್ಶನ ನೀಡಿದ ಮೂರು ಶಾಲೆಗಳಿಗೂ ಸಚಿವರು ಪಾರಿತೋಷಕ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry