55 ಪ್ರಕರಣ, 5 ಲಕ್ಷ ನಗದು ವಶ

7
ಮಟ್ಕಾ, ಜೂಜಾಟ: 136 ಆರೋಪಿಗಳ ಬಂಧನ

55 ಪ್ರಕರಣ, 5 ಲಕ್ಷ ನಗದು ವಶ

Published:
Updated:

ರಾಯಚೂರು: ಜಿಲ್ಲೆಯಾದ್ಯಂತ ಮಟ್ಕಾ, ಜೂಜಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ಸಂಪೂರ್ಣ ನಿರ್ಮೂಲನೆಗಾಗಿ ವಿಶೇಷ ತಂಡ ರಚನೆ ಮಾಡಿದ್ದು, ಈವರೆಗೆ 55 ಪ್ರಕರಣಗಳನ್ನು ದಾಖಲಿಸಲಾಗಿದೆ. 136 ಆರೋಪಿಗಳನ್ನು ಬಂಧಿಸಿ ₨5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಎಂ.ಎನ್‌. ನಾಗರಾಜ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 6 ವರ್ಷ ಗಳಿಂದ ಆರೋಪಿ ಬಸವರಾಜಯ್ಯ ಸ್ವಾಮಿ ಮಟ್ಕಾ, ಜೂಜಾಟದಲ್ಲಿ ತೊಡಗಿದ ಪ್ರಕರಣ ದಾಖಲಿದ್ದು, ಪೊಲೀಸರಿಗೆ ಕಣ್ಣು ತಪ್ಪಿಸಿ ಪರಾರಿಯಾ ಗುತ್ತಿದ್ದ. ಈ ಆರೋಪಿಯನ್ನು ಶಹಪುರ ದಲ್ಲಿ ಬಂಧಿಸಲಾಗಿದೆ ಎಂದರು.ಈ ಆರೋಪಿ ಬಂಧನಕ್ಕೆ ಲಿಂಗಸು ಗೂರು ಡಿಎಸ್‌ಪಿ ಅನಿತಾ ಹದ್ದಣ್ಣನವರ ನೇತೃತ್ವದಲ್ಲಿ ದೇವದುರ್ಗ ಸಿಪಿಐ ರಮೇಶ ಮೇಟಿ, ಪಿಎಸ್ಐಗಳಾದ ಬಸವರಾಜ ಪುಲ್ಲಾರಿ, ಬಸವರಾಜ ಬಿಸನಕೊಪ್ಪ, ಸಿಬ್ಬಂದಿ ನರೇಂದ್ರ, ಶೇಖರಪ್ಪ ಅವರ ನ್ನೊಳಗೊಂಡ ತಂಡ ರಚನೆ ಮಾಡಲಾ ಗಿತ್ತು. ಈ ತಂಡ ಆರೋಪಿಯನ್ನು ಬಂಧಿಸಿದ್ದು, ₨10ಸಾವಿರ ಬಹುಮಾನ ನೀಡಲಾ ಗುವುದು ಎಂದು ವಿವರಿಸಿದರು.ಜಿಲ್ಲೆಯಾದ್ಯಂತ ಮಟ್ಕಾ, ಜೂಜಾಟ ನಿಯಂತ್ರಣಕ್ಕಾಗಿ ನಾಲ್ಕು ತಂಡಗಳನ್ನು ರಚನೆ ಮಾಡಿದ್ದು, ಈ ಪೊಲೀಸ್‌ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದವರ ಹೆಸರನ್ನು ಗೋಪ್ಯ ವಾಗಿ ಇಡಲಾಗುವುದು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ನಾಗರಿಕರಿಗೆ ಅವರು ಬಯಸಿದಲ್ಲಿ ಪೊಲೀಸ್‌ ಇಲಾಖೆಯಿಂದ ಸೂಕ್ತ ರಕ್ಷಣೆ ಹಾಗೂ ಸಹಕಾರ ನೀಡಲಾಗುವುದು ಎಂದು ಹೇಳಿದರು. ಡಿಎಸ್‌ಪಿ ಎಂ.ಪಾಷಾ ಇತರ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry