ಗುರುವಾರ , ಮೇ 6, 2021
32 °C

55 ರೈಲುಗಳ ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆಂಧ್ರ ಪ್ರದೇಶದ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ಸೆ. 24 ಹಾಗೂ 25ರಂದು ಸತತ 48 ಗಂಟೆಗಳ ಕಾಲ ರೈಲು ತಡೆ ಚಳವಳಿ ನಡೆಸಲು ನಿರ್ಧರಿಸಿರುವುದರಿಂದ ರೈಲ್ವೆ ಇಲಾಖೆಯು ಈ ಎರಡೂ ದಿನ ಆಂಧ್ರದಲ್ಲಿ ಸಂಚರಿಸುವ 55 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ.ಯಶವಂತಪುರ- ಹೈದರಾಬಾದ್ ಗರೀಬ್ ರಥ ಹಾಗೂ ಹೈದರಾಬಾದ್- ಕೊಲ್ಲಾಪುರ ಛತ್ರಪತಿ ಸಾಹು ಮಹಾರಾಜ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ರಾಜ್ಯದಿಂದ ಆಂಧ್ರದತ್ತ ತೆರಳುವ ಬಹುತೇಕ ರೈಲುಗಳು ಈ ಎರಡು ದಿನ ಓಡುವುದಿಲ್ಲ. ಕೆಲವು ರೈಲುಗಳ ವೇಳೆಯನ್ನು ಬದಲಾಯಿಸಲಾಗಿದೆ. ಒಂಬತ್ತು ರೈಲುಗಳ ಮಾರ್ಗವನ್ನು ಸಹ ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.