59 ಕಪ್ ಐಸ್‌ಕ್ರೀಮ್ ತಿಂದ ಭೂಪ !

7

59 ಕಪ್ ಐಸ್‌ಕ್ರೀಮ್ ತಿಂದ ಭೂಪ !

Published:
Updated:

ಹುಬ್ಬಳ್ಳಿ:  ಒಂದು, ಎರಡು, ಮೂರು.... ಕಪ್‌ಗಟ್ಟಲೆ ಐಸ್‌ಕ್ರೀಮ್‌ಗಳು ಕ್ಷಣಾರ್ಧದಲ್ಲಿ ಗುಳುಂ. ಕೆಲವರು ನುಂಗಲಾರದೇ ನುಂಗಿದರು, ಕಣ್ಣಲ್ಲಿ ನೀರು ತುಂಬಿಕೊಂಡರೂ ಬಿಡದೇ ತಿಂದರು. ಹತ್ತು ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ ಐವತ್ತು ಕಪ್ ತಿಂದು ಸ್ಪರ್ಧೆಯಲ್ಲಿ ಗೆದ್ದರು.ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗವು ನಗರದ ಅಳಗುಂಡಗಿ ಓಣಿಯಲ್ಲಿ ಬುಧವಾರ ಆಯೋಜಿಸಿದ್ದ ಐಸ್‌ಕ್ರೀಮ್ ತಿನ್ನುವ ಸ್ಪರ್ಧೆಯು ರೋಚಕವಾಗಿತ್ತು. ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ರಸದೌತಣ ನೀಡಿತು.ಒಟ್ಟು 25 ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಐಸ್‌ಕ್ರೀಮ್ ತಿನ್ನಲು ಹತ್ತು ನಿಮಿಷಗಳ ಸಮಯ ನೀಡಲಾಗಿತ್ತು. ಈ ಅವಧಿಯಲ್ಲಿ ಅತಿಹೆಚ್ಚು ಐಸ್‌ಕ್ರೀಮ್ ತಿಂದವರಿಗೆ ವಿಜಯಿ ಪಟ್ಟ ಎಂದು ಘೋಷಿಸಲಾಯಿತು.

 

ಕಳೆದ ಬಾರಿ ಇಲ್ಲಿ ನಡೆದ ಇಡ್ಲಿ ತಿನ್ನುವ ಸ್ಫರ್ಧೆಯಲ್ಲಿ 44 ಇಡ್ಲಿ ಭಕ್ಷಿಸಿದ್ದ ಸಿದ್ದಪ್ಪ ಕಂಬಳಿ ಈ ಸ್ಪರ್ಧೆಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಒಟ್ಟು 59 ಕಪ್ ಐಸ್‌ಕ್ರೀಮ್ ತಿನ್ನುವ ಮೂಲಕ ಅಗ್ರಸ್ಥಾನ ಗಳಿಸಿದರು. ಅವರು ಒಮ್ಮೆಲೆ ಮೂರು-ನಾಲ್ಕು ಕಪ್ ಐಸ್‌ಕ್ರೀಮ್ ಅನ್ನು ಕೈಗೆ ಬಳಿದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದದ್ದನ್ನು ಕಂಡೇ ಜನ ಸುಸ್ತಾದರು.ಸಿದ್ದಪ್ಪರಿಗೆ ಸ್ಪರ್ಧೆ ನೀಡಿದ ಶಿವಾನಂದ ಅಬ್ಬಿಗೇರಿ 58 ಕಪ್‌ನಲ್ಲಿದ್ದ ಐಸ್‌ಕ್ರೀಮ್ ತಿಂದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಉಳಿದವರೂ ಇಪ್ಪತ್ತು-ಮೂವತ್ತು ಕಪ್‌ವರೆಗೂ ಭಕ್ಷಿಸಿದರು.ಮಕ್ಕಳಾದ ಅನುಭವ್ ಅಳಗುಂಡಗಿ ಹಾಗೂ ಇಮಾಮ್ ಹಬೀಬ್ ಸ್ಪರ್ಧೆಯನ್ನು ಉದ್ಘಾಟಿಸಿ ದರು. ಇದು ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ವಿಜಯ ಅಳಗುಂಡಗಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry