5.91 ಲಕ್ಷ ರೂ ದರೋಡೆ

ಭಾನುವಾರ, ಮೇ 19, 2019
32 °C

5.91 ಲಕ್ಷ ರೂ ದರೋಡೆ

Published:
Updated:

ಶಹಾಬಾದ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್‌ನ ಎ.ಟಿ.ಎಂ.ನಿಂದ ಮಂಗಳವಾರ ನಸುಕಿನ ಜಾವದಲ್ಲಿ ಸುಮಾರು 5.91 ಲಕ್ಷ ರೂಪಾಯಿ  ದರೋಡೆ ನಡೆದ ಘಟನೆ ಜರುಗಿದೆ.ದುಷ್ಕರ್ಮಿಗಳು ಎ.ಟಿ.ಎಂ. ಯಂತ್ರವನ್ನು ಒಡೆದು ಹಣ ಕದ್ದಿದ್ದಾರೆ. ಬೆಳಿಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಾಗಿ ತಕ್ಷಣವೆ ವಾಡಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.  ರೈಲ್ವೆ ನಿಲ್ದಾಣದ ಬಳಿ ಸದಾಕಾಲ ಜನಜಂಗುಳಿ ಇರುತ್ತದೆ.

ಆದರೂ ಈ ದರೋಡೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಕೆಲ ತಿಂಗಳ ಹಿಂದೆ ಎ.ಟಿ.ಎಂ. ಗಾಜು ಒಡೆದು ವಿಕಾರಗೊಳಿಸಲಾಗಿತ್ತು.

ಎಟಿಎಂಒಳಗಡೆ ಬೀಡಿ, ಸಿಗರೇಟು ಸೇದುವುದು, ಗುಟಕಾ ತಿಂದು ಉಗುಳುವ ಚಟುವಟಿಕೆಗಳು ನಡೆದಿದ್ದರೂ ಭದ್ರತಾ ಸಿಬ್ಬಂದಿಯನ್ನು ನೇಮಿಸಿರಲಿಲ್ಲ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry