ಶುಕ್ರವಾರ, ನವೆಂಬರ್ 15, 2019
21 °C

5.93 ಕೋಟಿ ರೂ. ಕಾಮಗಾರಿಗೆ ಚಾಲನೆ

Published:
Updated:

ಗಜೇಂದ್ರಗಡ: `ರೋಣ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಂದು ವರ್ಷದಲ್ಲಿ 593.06ಲಕ್ಷ ರೂಪಾಯಿಗಳಲ್ಲಿ 20.08 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ತಿಳಿಸಿದರು.ಇಲ್ಲಿಗೆ ಸಮೀಪದ ಪುರ್ತಗೇರಿ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ `ನಮ್ಮ ಗ್ರಾಮ ನಮ್ಮ ರಸ್ತೆ~ ಯೋಜನೆ ಅಡಿಯಲ್ಲಿ ರೂ. 67 ಲಕ್ಷ  ವೆಚ್ಚದಲ್ಲಿ 2.130ಕಿ.ಮೀ. ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಅವರು ಮಾತ ನಾಡಿದರು.ಪುರ್ತಗೇರಿ ಗ್ರಾಮದ ರಸ್ತೆ ಸುಧಾರಣೆಯಿಂದ ಒಟ್ಟು 564 ಜನ ತಮ್ಮ ದೈನಂದಿನ ವ್ಯವಹಾರಗಳಿಗೆ ಮುಖ್ಯ ರಸ್ತೆಯ ಸಂಪರ್ಕಕ್ಕೆ ಬರುತ್ತಾರೆ. 5ವರ್ಷಗಳ ನಿರ್ವಹ ಣೆಯೊಂದಿಗೆ ಇದನ್ನು ಸರ್ವಋತು ರಸ್ತೆಯಾಗಿ ಮಾರ್ಪಡಿಸ ಲಾಗುತ್ತದೆ ಎಂದರು.11 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳಲಿದ್ದು, ರಸ್ತೆಯ ನಿರ್ಮಾಣಕ್ಕೆ 41.37ಲಕ್ಷ, 7ಹೊಸ ಅಡ್ಡಮೋರಿಗಳ ನಿರ್ಮಾಣಕ್ಕೆ ರೂ. 21.28ಲಕ್ಷ  ಹಾಗೂ 4.91ಲಕ್ಷ  5ವರ್ಷಗಳ ನಿರ್ವಹಣಾ ವೆಚ್ಚ ಸೇರಿದಂತೆ 67.49 ಲಕ್ಷ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ಸುಧಾರಣೆ ಆಗುತ್ತದೆ ಎಂದು ಅವರು ಹೇಳಿದರು.ರಾಜ್ಯದಲ್ಲಿ ಇನ್ನು ಅನೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಇಲ್ಲದ್ದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 20ಕಿ.ಮೀ. ಗ್ರಾಮೀಣ ರಸ್ತೆಯನ್ನು ಅಭಿವೃದ್ಧಿ ಗೊಳಿಸಲು ಮುಂದಾಗಿದೆ ಎಂದರು.ರಸ್ತೆ ಅಭಿವೃದ್ಧಿಯ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸಬೇಕು. ಕಾಮಗಾರಿ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಗುಣಮಟ್ಟ ವನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮಸ್ಥರು ಕಾಮಗಾರಿಗೆ ಸೂಕ್ತ ಸಹಕಾರ ಕೊಡುವ ಮೂಲಕ ಉತ್ತಮ ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಲು ಮನವಿ ಹೇಳಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಉಪಾಧ್ಯಕ್ಷ ಭೀರಪ್ಪ ಬಂಡಿ, ಜಿ.ಪಂ.ಸದಸ್ಯ ರಮೇಶ ಮುಂದಿನಮನಿ, ತಾ.ಪಂ.ಸದಸ್ಯೆ ಲಲಿತಾ ಪೂಜಾರ, ಗ್ರಾ.ಪಂ.ಸದಸ್ಯ ಲಕ್ಷ್ಮಣ ಗೂಳಿ, ರಾಜು ಪಾಟೀಲ, ಕನಕಪ್ಪ ಪೂಜಾರ, ಈರಪ್ಪ ಕಲಕೇರಿ, ಪರಸಪ್ಪ ಮುಶಿಗೇರಿ, ಸಂಗಪ್ಪ ಹರಿಜನ, ಬಾಳಾಸಾಹೆಬ ಕಿಲ್ಲೆದಾರ, ಶಂಕ್ರಪ್ಪ ನೀಲಗುಂದ, ರಸೂಲಸಾಬ ಸುಂಕದ, ಈರಪ್ಪ ಹಡಪದ, ಗದಗ ಜಿಲ್ಲಾ ಯೋಜನಾ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಜಿ. ಪಾಟೀಲ, ಯು.ಆರ್.ಇಟಗಿ  ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)