ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ತಲೆಮಾರಿನ ಮಗು ಜನನ!

Last Updated 18 ಸೆಪ್ಟೆಂಬರ್ 2013, 19:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರ 4ನೇ ಹಂತದ ಡಾ.ಕೆ.ರಮೇಶ್‌ ಆಸ್ಪತ್ರೆಯಲ್ಲಿ ಐದನೇ ತಲೆಮಾರಿನ ಮಗು ಜನನ­ವಾಗಿದೆ! ಆಸ್ಪತ್ರೆಯ ವೈದ್ಯರ ತಂಡ ಸಿಸೇರಿ­ಯನ್‌ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ಡಾ.ರಮೇಶ್‌ ಅವರ ದೊಡ್ಡಮ್ಮನ ಮಗಳು ಸ್ನೇಹ ಎಂಬುವರು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸ್ನೇಹ ಅವರ ತಾಯಿ ಶಾರದಮ್ಮ, ಅಜ್ಜಿ ರುದ್ರಮ್ಮ ಹಾಗೂ ಮುತ್ತಜ್ಜಿ ದೊಡ್ಡಮ್ಮ ತಮ್ಮ ಐದನೇ ತಲೆಮಾರಿನ ಮಗುವನ್ನು ನೋಡಿ ಪುಳಕಿತರಾಗಿ­ದ್ದಾರೆ. ರುದ್ರಮ್ಮ ಅವರ ತಂಗಿ ಭದ್ರಮ್ಮ ಡಾ.ರಮೇಶ್‌ ಅವರ ತಾಯಿ.

ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ವಿದ್ಯಮಾನ ಅಪರೂಪ ಎನ್ನಲಾಗಿದೆ. ಮೂಲತಃ ಕುಣಿಗಲ್‌ ತಾಲ್ಲೂಕು ಹೊಸಕೆರೆ ಗ್ರಾಮದ ದೊಡ್ಡಮ್ಮ ಅವರಿಗೆ 100 ವರ್ಷ ತುಂಬಿದೆ. ಆದರೂ ಅವರು ಊರುಗೋಲಿನ ಸಹಾಯವಿಲ್ಲದೇ ಸ್ವತಂತ್ರವಾಗಿ ನಡೆದಾಡುತ್ತಾರೆ.

‘ನನ್ನ ತಲೆಮಾರಿನ ಐದನೇ ಮಗು­ವನ್ನು ಕಂಡಿರುವುದು ನನಗೆ ಅತೀವ ಸಂತಸ ತಂದಿದೆ. ನನ್ನ ಮಗಳು, ಮೊಮ್ಮಗಳು, ಮುಮ್ಮಗಳನ್ನು ಕಂಡಿದ್ದ ನನಗೆ ಮರಿ ಮಗನನ್ನು ನೋಡಿದ್ದು ಆಶ್ಚರ್ಯದಂತಿದೆ. ನನ್ನ ಮೊಮ್ಮಗ ರಮೇಶ್‌ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸು­ತ್ತಿ­ರುವ ಕಾರ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ದೊಡ್ಡಮ್ಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT