6ಕ್ಕೆ ಕಾಂಗ್ರೆಸ್‌ ಎಸ್‌ಸಿ ರಾಜ್ಯ ಮಟ್ಟದ ಸಮಾವೇಶ

7

6ಕ್ಕೆ ಕಾಂಗ್ರೆಸ್‌ ಎಸ್‌ಸಿ ರಾಜ್ಯ ಮಟ್ಟದ ಸಮಾವೇಶ

Published:
Updated:

ಚಿಕ್ಕಬಳ್ಳಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಮಟ್ಟದ ಸಮಾವೇಶ­ವನ್ನು ಬೆಂಗಳೂರಿನ ಅರಮನೆ ಮೈದಾನ­ದಲ್ಲಿ ಜ.6ರಂದು ಆಯೋಜಿಸ­ಲಾಗಿದ್ದು, ವಿವಿಧ ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿ­ಸಲಿದ್ದಾರೆ ಎಂದು ಪಕ್ಷದ ಪರಿಶಿಷ್ಟ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎನ್‌.ಮಂಜುನಾಥ್ ತಿಳಿಸಿದರು.ಪರಿಶಿಷ್ಟ ವಿಭಾಗವನ್ನು ಬಲ­ಪಡಿಸುವ ಉದ್ದೇಶದಿಂದ ರಾಜ್ಯ­ಮಟ್ಟದ ಸಮಾವೇಶ ಆಯೋಜಿಸ­ಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆ ಮತ್ತು ಪ್ರದೇಶಗಳಿಂದಲೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಪಕ್ಷದ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರಮಟ್ಟದ ನಾಯ­ಕರು ಮತ್ತು ಸಚಿವರು ಭಾಗ­ವಹಿಸ­ಲಿದ್ದಾರೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪರಿಶಿಷ್ಟ ವಿಭಾಗದಲ್ಲಿ ಎಡ, ಬಲವೆಂದು ವಿಂಗಡಣೆ ಮಾಡದೆ ಎಲ್ಲರೂ ಒಂದು ಮತ್ತು ಸಮಾನರೆಂದು ಪರಿಗಣಿಸುತ್ತೇವೆ. ಯಾವುದೇ ಸಮು­ದಾಯಕ್ಕೆ ಅನ್ಯಾಯವಾದರೂ ಅದನ್ನು ನಾವು ಸಹಿಸುವುದಿಲ್ಲ. ಸಮುದಾಯಕ್ಕೆ ನ್ಯಾಯ ದೊರೆಯುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲೆಂದೇ ನಾವು ಸಮಾವೇಶ ಆಯೋಜಿಸು­ತ್ತಿದ್ದೇವೆ ಎಂದು ಅವರು ತಿಳಿಸಿದರು.ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೊಂಡು ಉಪಮುಖ್ಯಮಂತ್ರಿ ಸ್ಥಾನವನ್ನು ಡಾ.ಜಿ.ಪರಮೇಶ್ವರ್ ಅವರಿಗೆ ಕೊಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ. ಪಕ್ಷದ ಗೆಲುವಿಗೆ ಮತ್ತು ಬಲಪಡಿಸಲು ಅವರು ಸಾಕಷ್ಟು ದುಡಿದಿದ್ದು, ಸರ್ಕಾರದಲ್ಲಿ ಪ್ರಮುಖ ಹುದ್ದೆ ಕೊಟ್ಟರೆ ನಮಗೆ ಸಂತಸ­ವಾಗುತ್ತದೆ ಎಂದು ಅವರು ತಿಳಿಸಿದರು. ಮಾಜಿ ಶಾಸಕರಾದ ಅನ­ಸೂಯಮ್ಮ ನಟರಾಜನ್, ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಸಂಚಾಲಕರಾದ ಸಂದೀಪ್‌ ಚಕ್ರವರ್ತಿ, ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry