6ನೇ ವೇತನ ವರದಿ ಜಾರಿಗೆ ಒತ್ತಾಯ

7

6ನೇ ವೇತನ ವರದಿ ಜಾರಿಗೆ ಒತ್ತಾಯ

Published:
Updated:

ಮೈಸೂರು:  `ಸರ್ಕಾರ 6 ನೇ ವೇತನ ಸಮಿತಿಯ ವರದಿಯನ್ನು ಕೂಡಲೇ ಪಡೆದುಕೊಂಡು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಕೇಂದ್ರ ಸರ್ಕಾರ ನೌಕರರ ವೇತನಕ್ಕೆ ಸಮನಾಂತರವಾಗಿ ಪರಿಷ್ಕರಣೆ ಮಾಡಬೇಕು~ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಶುಕ್ರವಾರ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈಗ ಶೇ.50 ರಷ್ಟು ವ್ಯತ್ಯಾಸವಿದ್ದು, ರಾಜ್ಯ ಸರ್ಕಾರ ಶೇ 15 ರಷ್ಟು ಕೊಟ್ಟಿದ್ದು, ಇನ್ನು ಶೇ 35 ರಷ್ಟನ್ನು ಆದಷ್ಟು ಬೇಗನೆ ಕೊಡಬೇಕು~ ಎಂದು ಹೇಳಿದರು.ಡಿ.ಇಡಿ (ಟಿಸಿಎಚ್) ಹಾಗೂ ಬಿ.ಇಡಿ ಶಿಕ್ಷಣದಲ್ಲಿ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯವನ್ನು ತೆರೆಯಬೇಕು. ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೂ ವೇತನಾನು ದಾನ ನೀಡಬೇಕು. ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿಭಾಗವಾರು ಆಯುಕ್ತಾಲಯಗ ಳನ್ನು ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ಮೈಸೂರು ವಿಭಾಗಕ್ಕೂ ಪ್ರತ್ಯೇಕ ಆಯುಕ್ತಾಯಲ ವನ್ನು ನಗರದಲ್ಲಿ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು.ಶಿಕ್ಷಣ ಇಲಾಖೆಯ ಬೋಧಕ ಬೋಧಕೇತರರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಹಣ ಕಳೆದ 2 ವರ್ಷಗಳಿಂದ ಅನೇಕ ಕಾರಣಗಳಿಂದ ಮಂಜೂರಾತಿ ಆಗುತ್ತಿಲ್ಲ. ಈ ಸಂಬಂಧ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಅನುದಾನಿತ, ಅನುದಾ ನರಹಿತ ಶಾಲಾ-ಕಾಲೇಜುಗಳ ಬೋಧಕ ಬೋಧಕೇ ತರ ಸಿಬ್ಬಂದಿಗಳ ಕುಟುಂಬದ ಸದಸ್ಯರನ್ನೊಳ ಗೊಂಡಂತೆ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಬೇಕು~ ಎಂದು ಒತ್ತಾಯಿಸಿದರು.ಹೋರಾಟಕ್ಕೆ ಜಯ: `1995 ರ ವರೆಗಿನ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವಂತೆ ಕಳೆದ ಮೂರೂವರೆ ವರ್ಷಗಳಲ್ಲಿ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪುಟ್ಟಣ್ಣ ಹಾಗೂ ನಾನು ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ಫೆ.22 ರಂದು ಧಾರವಾಡದಿಂದ ಬೆಂಗಳೂರಿಗೆ ಶಿಕ್ಷಕರು ಪಾದಯಾತ್ರೆ ಆರಂಭಿಸಿದ್ದರು.

 

ಕೊನೆಗೂ ಸರ್ಕಾರ ಮಣಿದು 296 ಪ್ರಾಥಮಿಕ ಶಾಲೆಗಳು, 336 ಪ್ರೌಢಶಾಲೆಗಳು, 90 ಪದವಿಪೂರ್ವ ಕಾಲೇಜುಗ ಳಿಗೆ 111 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry