ಭಾನುವಾರ, ಜೂನ್ 13, 2021
29 °C
ಮಸ್ಕಿ ಗ್ರಾಮ ಪಂಚಾಯಿತಿ ಉಪ ಚುನಾವಣೆ

6 ಕಾಂಗ್ರೆಸ್‌ , 5 ಬಿಜೆಪಿ ಬೆಂಬಲಿತರ ಗೆಲುವು

'ಪ್ರಜಾವಾಣಿ ವಾರ್ತೆ/ – ವೆಂಕಟೇಶ ನೀಲಗಲ್‌ Updated:

ಅಕ್ಷರ ಗಾತ್ರ : | |

ಮಸ್ಕಿ: ಮಸ್ಕಿ ಗ್ರಾಮ ಪಂಚಾಯಿತಿಯ 11 ಸ್ಥಾನಗಳ ಉಪ ಚುನಾವಣೆ ಫಲಿ­ತಾಂಶ ಬುಧವಾರ ಪ್ರಕಟಗೊಂಡಿದ್ದು, 11  ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿ­ತರು 6, ಹಾಗೂ ಬಿಜೆಪಿ ಬೆಂಬಲಿತರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯ­ಕರ್ತರು ಪ್ರತ್ಯೇಕವಾಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪರಸ್ಪರ ಬಣ್ಣ ಹಾಕಿಕೊಂಡು ಗೆಲುವಿನ ಸಂಭ್ರಮಾಚರಣೆ ಆಚರಿಸಿದರು.ಪರ್ತಕರ್ತ ಮಂಜುನಾಥ ಸಾಲಿ­ಮಠ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಾರ್ಡ್ 8 ರಲ್ಲಿ ಜಯಗಳಿಸಿದ್ದಾರೆ. ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲರ ಪುತ್ರ ವಾರ್ಡ್ 14ರಲ್ಲಿ ಜಯಗಳಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಸದಸ್ಯೆ ನೀಲಮ್ಮ ಮರಳದ ಅವರ ಪತಿ ಬಸವರಾಜ ಮರಳದ ವಾರ್ಡ್‌ 9 ರಲ್ಲಿ  ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  ಅವರ ಪ್ರತಿಸ್ಪರ್ಧಿ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶರಣಪ್ಪ ಎಲಿಗಾರ ಅಲ್ಪಮತಗಳ ಅಂತರಿದಿಂದ ಪರಭಾವಗೊಂಡಿದ್ದಾರೆ.51 ಸದಸ್ಯ ಬಲದ ಮಸ್ಕಿ ಗ್ರಾಮ ಪಂಚಾಯಿತಿಯಲ್ಲಿ ಚೆಕ್ ಹಗರಣದಿಂದ  9 ವಾರ್ಡ್‌ಗಳ 11 ಸದಸ್ಯರು ಚುನಾವಣೆ ಆಯೋಗದಿಂದ ಅನರ್ಹಗೊಂಡಿದ್ದರು. 11 ಸ್ಥಾನಗಳಿಗೆ ನಡೆದ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿತ್ತು. ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಪರವಾಗಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಇತರೆ ಪ್ರಮುಖ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾ­ದೇವಪ್ಪಗೌಡ ಪೊಲೀಸ್‌ ಪಾಟೀಲ ಮತ್ತಿತರ ಮುಖಂಡರು ಪ್ರಚಾರ ನಡೆಸಿದ್ದರು. ಇಬ್ಬರು ಮುಖಂಡರಿಗೆ ಉಪ ಚುನಾವಣೆ ಪ್ರತಿಷ್ಠೆಯಾಗಿತ್ತು.ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು: ನಾಗಭೂಷಣ (ವಾರ್ಡ್‌ 1), ಮಂಜುಳಾ ಬಳಿಗಾರ (ವಾರ್ಡ್ 3), ಕಮಲಮ್ಮ ಮಲ್ಲಪ್ಪ (ವಾರ್ಡ್ 12), ರಮೇಶ ತಿಮ್ಮಣ್ಣ (ವಾರ್ಡ್ 12), ಹನುಮಂತಪ್ಪ ಕ್ಯಾತನಟ್ಟಿ (ವಾರ್ಡ್‌ 13), ಶಿವರಾಜ ಪಾಟೀಲ (ವಾರ್ಡ್ 14)ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು : ಭರ­ತ­ಶೇಠ (ವಾರ್ಡ್ 5), ರಾಮನಗೌಡ (ವಾರ್ಡ್ 7), ಮಂಜುನಾಥ ಸಾಲಿಮಠ (ವಾರ್ಡ್‌ ), ಮಲ್ಲಯ್ಯ ಛಾವಣಿ (ವಾರ್ಡ್‌ 8), ಬಸವರಾಜ ಮರಳದ (ವಾರ್ಡ್ 9)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.